ಪ್ರೀತಿಯ ಬೆಂಕಿಯಲ್ಲಿ ಸುಟ್ಟಿದ್ದು ಇಬ್ಬರು..! ಛೇ..ಪಾಪ..

ಮದುವೆಗೆ ನಿರಾಕರಿಸಿದ ಕಾರಣಕ್ಕೆ 17 ವರ್ಷದ ಯುವತಿಯನ್ನು ಸುಟ್ಟು ಹಾಕಲಾಗಿದೆ. 17 ವರ್ಷದ ಯುವತಿ ದೇವಿಕ ಎಂಬಾಕೆಯನ್ನು ಮಿಥುನ್ ಎಂಬಾತ ತುಂಬಾ ಸತಾಯಿಸುತ್ತಿದ್ದ. ಮಿಥುನ್ ಜೊತೆ ಆತನ ಕುಟುಂಬವೂ ಸೇರಿಕೊಂಡು ಮದುವೆಗೆ ಒತ್ತಾಯಿಸುತ್ತಿದ್ದರು. ಆದ್ರೆ ಇದಕ್ಕೆ ದೇವಿಕಾ ಮನೆಯವರು ನಿರಾಕರಿಸಿದ್ದರು. ಈ ವಿಚಾರ ಪೊಲೀಸ್ ಠಾಣೆವರೆಗೂ ಹೋಗಿತ್ತು. ಪೊಲೀಸರು ಕರೆದು ಮಧ್ಯಸ್ಥಿಕೆ ಮಾಡಿ ಕಳುಹಿಸಿದ್ದರು. ಮಿಥುನ್ ಕೂಡ ನಾನು ಇನ್ಮುಂದೆ ದೇವಿಕ ಸುದ್ದಿಗೆ ಹೋಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಆದ್ರೆ ಇಂದು ಬೆಳಗ್ಗೆ ದೇವಿಕ ಮನೆಗೆ ಬಂದ ಮಿಥುನ್, ದೇವಿಕಾಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಮಿಥುನ್‍ಗೂ ಬೆಂಕಿ ತಗುಲಿದೆ. ಇಬ್ಬರನ್ನೂ ಸ್ಥಳೀಯ ಎರ್ನಾಕುಲಂ ಮೆಡಿಕಲ್ ಕಾಲೇಜಿಗೆ ರವಾನಿಸಲಾಯ್ತಾದ್ರೂ ಇಬ್ಬರೂ ಸಾವನ್ನಪ್ಪಿದ್ದಾರೆ.

Contact Us for Advertisement

Leave a Reply