ಕಿಮ್‌ ಜಾಂಗ್‌ ಉನ್‌ ಪತ್ನಿ ಪ್ರತ್ಯಕ್ಷ!

masthmagaa.com:

ಕಿಮ್ ಜಾಂಗ್ ಉನ್​ ಅವರ ಪತ್ನಿ ರಿ ಸೋಲ್​ ಜು ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಿಮ್ ಜಾಂಗ್​ರ ತಂದೆ, ದಕ್ಷಿಣ ಕೊರಿಯಾದ ಈ ಹಿಂದಿನ ರೂಲರ್, ಕಿಮ್ ಜಾಂಗ್ ಇಲ್​ ಅವರ ಜಯಂತಿ ಇತ್ತು. ಇದಕ್ಕಾಗಿ ಮ್ಯೂಸಿಕ್ ಕಾರ್ಯಕ್ರಮ ಇಟ್ಕೊಂಡಿದ್ರು. ಇದರಲ್ಲಿ ಕಿಮ್ ಫುಲ್ ವಿಕಟಾಟ್ಟಹಾಸ ಮಾಡ್ತಾ ಕಾಣಿಸಿಕೊಂಡಿದ್ದರೆ, ಅವರ ಪಕ್ಕದಲ್ಲಿ ಪತ್ನಿ 32 ವರ್ಷದ ರಿ ಸೋಲ್ ಜು ಕೂಡ ಇದ್ರು.

ವರ್ಷಗಳ ಕಾಲ ಇವರು ಕಾಣಿಸದ ಕಾರಣ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಕಿಮ್ ತನ್ನ ಪತ್ನಿಯನ್ನ ಮುಗಿಸೇಬಿಟ್ಟಿದ್ದಾರೆ ಅಂತೆಲ್ಲ ವರದಿಯಾಗಿತ್ತು. ಆದ್ರೆ ಈಗ ಫೈನಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರೋದು ದಕ್ಷಿಣ ಕೊರಿಯಾದಲ್ಲಿ ಬಹಳ ದೊಡ್ಡ ಸುದ್ದಿಯಾಗಿದೆ. ಅಲ್ಲಿ ಸರ್ಕಾರಿ ಟಿವಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಹಾಗೂ ನ್ಯೂಸ್ ಪೇಪರ್ ರೋಡೋಂಗ್ ಸಿನ್​ಮುನ್​ ಇವರಿಬ್ಬರ ಫೋಟೋಗಳನ್ನ ಭಾರೀ ದೊಡ್ಡ ವಿಚಾರ ಅನ್ನೋ ರೀತಿಯಲ್ಲಿ ಪ್ರಕಟಿಸಿವೆ.

-masthmagaa.com

Contact Us for Advertisement

Leave a Reply