ಕೊಹ್ಲಿಗೆ ಐಸಿಸಿ ವಾರ್ನಿಂಗ್.. ಜೊತೆಗೆ ಡೀಮೆರಿಟ್ ಪಾಯಿಂಟ್..!

ದಕ್ಷಿಣಾ ಆಫ್ರಿಕ್ ವಿರುದ್ಧದ 3ನೇ ಟಿ-20 ಪಂದ್ಯದ ವೇಳೆ ಕೊಹ್ಲಿಯ ನಡವಳಿಕೆಗೆ ಐಸಿಸಿ ರಾಂಗ್ ಆಗಿದೆ. ಕ್ಯಾಪ್ಟನ್ ಕೊಹ್ಲಿಗೆ ಎಚ್ಚರಿಕೆ ನೀಡಿ 1 ಡೀಮೆರಿಟ್ ಪಾಯಿಂಟ್ ಕೊಟ್ಟಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೊಹ್ಲಿ ರನ್ ಓಡುವಾಗ ದಕ್ಷಿಣ ಆಫ್ರಿಕಾ ಬೌಲರ್ ಬ್ಯೂರಾನ್ ಹೆಂಡ್ರಿಕ್ಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಆದ್ರೆ ಇದು ಬೇಕಂತಲೇ ಡಿಕ್ಕಿ ಹೊಡೆದಿರೋದು ಎಂದು ಆರೋಪಿಸಿರುವ ಐಸಿಸಿ ಒಂದು ಡೀಮೆರಿಟ್ ಅಂಕ ಕೊಟ್ಟಿದೆ. ಐಸಿಸಿ ನೀತಿ ಸಂಹಿತೆಯ ಪ್ರಾಥಮಿಕ ಹಂತವನ್ನು ಉಲ್ಲಂಘಿಸಿದ್ದಾರೆ ಅಂತ ಪಂದ್ಯದ ಅಂಪೈರ್ ಗಳಾದ ನಿತಿನ್ ಮೆನನ್ ಮತ್ತು ಸಿ.ಕೆ ನಂದನ್ ವರದಿ ನೀಡಿದ್ದರು. ಅದರ ಆಧಾರದಲ್ಲಿ ಕೊಹ್ಲಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಡಿಮೆರಿಟ್ ಅಂಕವನ್ನು 2016ರಲ್ಲಿ ಜಾರಿಗೆ ತರಲಾಯ್ತು. 2 ವರ್ಷಗಳಲ್ಲಿ 4 ಬಾರಿ ಈ ಅಂಕ ಪಡೆದರೆ ಅಂತಹ ಆಟಗಾರನನ್ನು 1 ಟೆಸ್ಟ್ ಅಥವಾ 2 ಏಕದಿನ ಅಥವಾ 2 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಂದ ಅಮಾನತು ಮಾಡಲಾಗುತ್ತೆ. ಕೊಹ್ಲಿ ಈವರೆಗೆ ಒಟ್ಟು 3 ಬಾರಿ ಡೀಮೆರಿಟ್ ಅಂಕಗಳನ್ನು ಪಡೆದಿದ್ದಾರೆ.

Contact Us for Advertisement

Leave a Reply