ಸೀತೆ ಆಗಿ ಬಂದ ಕೃತಿ ಸನೋನ್‌ !

masthmagaa.com:

ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ʻಆಧಿಪುರುಷʼ ಸಿನಿಮಾ ಚಿತ್ರೀಕರಣ ಮುಗಿದಿದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿತ್ತು. ಟ್ರೇಲರ್‌ ಬಳಿಕ ಸಿನಿಮಾದ ಲಿರಿಕಲ್‌ ವಿಡಿಯೋ ಒಂದು ರಿಲೀಸ್‌ ಆಯಿತು. ಇದೀಗ ಚಿತ್ರತಂಡ ಕೃತಿ ಸನೋನ್‌ ಅವರ ಸೀತೆ ಪಾತ್ರದ ಪೋಸ್ಟರ್‌ ಬಿಡುಗಡೆ ಮಾಡಿದೆ.

ಕೃತಿ ಸನೋನ್‌ ಅವರಿಗೆ ಸೀತೆಯ ಪಾತ್ರ ಒಪ್ಪಿದೆ. ಲಂಕೇಯಲ್ಲಿ ಸೀತೆ ಸೆರೆಯಾಗಿದ್ದಾಗ ಅವಳು ರಾಮನಿಗಾಗಿ ಕಾಯುವ ಪೋಟೋ ಇದಾಗಿದೆ. ಕಣ್ಣಲ್ಲಿ ಕಂಬನಿ, ರಾಮ ಬಂದೇ ಬರುವನು ಎಂಬ ಭರವಸೆಯಿಂದ ಕಾಯುತ್ತಿರುವ ಸೀತೆಯಾಗಿ ಪೋಸ್ಟರ್‌ನಲ್ಲಿ ಕೃತಿ ಸನೋನ್‌ ಕಾಣಿಸಿಕೊಂಡಿದ್ದಾರೆ.

ರಾಮನ ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ಸೀತೆಗೆ ಆಸರೆಯಾಗಿ ಅವಳ ಹಿಂದೆ ರಾಮ ನಿಂತಿರುವ ಪೋಸ್ಟರ್‌ನ್ನು ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇನ್ನು ಸಿನಿಮಾ ಜೂನ್​ 16ರಂದು ರಿಲೀಸ್ ಆಗುತ್ತಿದೆ.

-masthmagaa.com

Contact Us for Advertisement

Leave a Reply