ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ “ಲಂಕಾಸುರ” ವಿಶೇಷ ಟೀಸರ್ ರೆಡಿ!

masthmagaa.com:

ಮಾರ್ಚ್ 30 ರಂದು ನಮ್ಮ ತಂದೆ ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಲಾಂಛನದಿಂದ ನಿರ್ಮಾಣವಾಗಿರುವ ಮೊದಲ ಚಿತ್ರ ‘ಲಂಕಾಸುರ’ದ ವಿಶೇಷ ಟೀಸರ್ ಬಿಡುಗಡೆಯಾಗಲಿದೆ.

ನಾವು ಈ ಚಿತ್ರ ಪ್ರಾರಂಭಿಸಿದ ದಿನದಿಂದಲೂ ನಮಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಖುಣಿ. ನಮಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎನ್ನುತ್ತಾರೆ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್.

ಈಗಾಗಲೇ ‘ಲಂಕಾಸುರ’ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರ ಅಭಿಮಾನಿಗಳಿಗಿದೆ. ಅನುಭವಿ ಕಲಾವಿದರ ಅಭಿನಯ ಹಾಗೂ ಉತ್ತಮ ತಂತ್ರಜ್ಞರ ಕಾರ್ಯವೈಖರಿಯಲ್ಲಿ ಲಂಕಾಸುರ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

-masthmagaa.com

Contact Us for Advertisement

Leave a Reply