ಇಸ್ರೇಲ್-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ! ಮುಸ್ಲಿಂ ರಾಷ್ಟ್ರಗಳಿಗೆ ಟೆನ್ಶನ್​​

masthmagaa.com:

ಇಸ್ರೇಲ್​​ನಲ್ಲಿ ಹೊಸ ಸರ್ಕಾರ ಬರ್ತಿದ್ದಂತೆ ಅಮೆರಿಕ ಜೊತೆಗಿನ ಸಂಬಂಧವನ್ನು ಸುಧಾರಿಸುವತ್ತ ಗಮನ ಹರಿಸ್ತಾ ಇದೆ. ಈಗಾಗಲೇ ಹೊಸ ಸರ್ಕಾರದ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್ ಇಟಲಿಯ ರೋಮ್ ನಗರದಲ್ಲಿ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಆಂಟೋನಿ ಬ್ಲಿಂಕನ್ ಭೇಟಿಯಾಗಿದ್ದಾರೆ. ಈ ವೇಳೆ ಇರಾನ್ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ನಂತರ ಮಾತನಾಡಿದ ರ್ಯಾರ್ ಲ್ಯಾಪಿಡ್​​, ಅಮೆರಿಕದ ಜೊತೆ ಇರಾನ್​​ ಪರಮಾಣು ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ ಅಂದ್ರು. ಇದೇ ವೇಳೆ ಅಮೆರಿಕ ಮತ್ತು ಇಸ್ರೇಲ್​ ನಡುವೆ ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಅಂಶಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಂಡು ಮುಂದೆ ಸಾಗೋದಾಗಿ ಹೇಳಿದ್ಧಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಬೆಂಜಮಿನ್ ನೆತಾನ್ಯಹು ಸರ್ಕಾರ 2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಇರಾನ್ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಂಡಿದ್ದಾಗ ವಿರೋಧ ವ್ಯಕ್ತಪಡಿಸಿದ್ರು. ಅದೇ ರೀತಿ 2018ರಲ್ಲಿ ಟ್ರಂಪ್ ಒಪ್ಪಂದದಿಂದ ಹೊರಬಂದಾಗ ಬೆಂಬಲಿಸಿದ್ರು. ಇದೀಗ ಬೈಡೆನ್ ಆಡಳಿತ ಪುನಃ ಇರಾನ್​ನನ್ನು ಆ ಪರಮಾಣು ಒಪ್ಪಂದದೊಳಗೆ ತರಲು ಯತ್ನಿಸ್ತಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲೆಲ್ಲಾ ಮಾತನಾಡಕ್ಕೆ ಆಗಲ್ಲ. ಸಭೆ ನಡೆಸಿ ಈ ಬಗ್ಗೆ ಚರ್ಚಿಸ್ತೇವೆ ಅಂತ ಹೇಳಿದ್ದಾರೆ ರ್ಯಾರ್ ಲ್ಯಾಪಿಡ್.. ಆದ್ರೆ ಅಮೆರಿಕ ಮತ್ತು ಇಸ್ರೇಲ್ ಮತ್ತಷ್ಟು ಹತ್ತಿರವಾಗ್ತಿರೋದು ಕಳೆದ ತಿಂಗಳು ಇಸ್ರೇಲ್-ಗಾಜಾ ಸಂಘರ್ಷದ ವೇಳೆ ಪ್ಯಾಲೆಸ್ತೇನ್ ಪರವಾಗಿ ಬ್ಯಾಟ್ ಬೀಸಿದ್ದ ಮುಸ್ಲಿಂ ರಾಷ್ಟ್ರಗಳ ಟೆನ್ಶನ್​​ಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply