ಈ ಬೆಕ್ಕು ಬ್ರಿಟನ್‌ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉದ್ಯೋಗಿ!

masthmagaa.com:

ಬ್ರಿಟನ್​​ ಪ್ರಧಾನಿಯ ಕಚೇರಿಯಲ್ಲಿ ಒಬ್ರು ಆಫೀಸರ್ ಇದ್ದಾರೆ. ಅವರ ಹೆಸರು ಲ್ಯಾರಿ ದ ಕ್ಯಾಟ್ ಅಂತ. ಇದೇ ಆ ಬೆಕ್ಕು. ಇದಕ್ಕೆ ಈಗ ದೇಶದ ಚೀಫ್ ಇಲಿಬೇಟೆಗಾರ ಸ್ಥಾನ ಸಿಕ್ಕಿ 10 ವರ್ಷ ಆಗಿದೆ. 2011 ರಲ್ಲಿ ಅಂದಿನ ಪ್ರಧಾನಿ ಜೇಮ್ಸ್ ಕ್ಯಾಮರೂನ್, ತಮ್ಮ ಕಚೇರಿ ಬಳಿ ಕಾಟ ಕೊಡ್ತಿದ್ದ ಇಲಿ ಹಿಡಿಯಕ್ಕೆ ಅಂತಾ ಇದನ್ನ ತಗೊಂಡು ಬಂದಿದ್ರು. ಈ ಹಿಂದೆ ಬೀದಿ ಬೆಕ್ಕಾಗಿದ್ದ ಇದಕ್ಕೆ ತಮ್ಮ ಸಂಪುಟ ಕಚೇರಿಯಲ್ಲಿ ಚೀಫ್ ಮೌಸ್ ಕ್ಯಾಚರ್ ಅಂತಾ ಹುದ್ದೆ ಕೊಟ್ಟಿದ್ದರು. ಈಗ ಈ ಬೆಕ್ಕು ಈ ಹುದ್ದೆಯಲ್ಲಿ 10 ವರ್ಷ ಕಂಪ್ಲೀಟ್ ಮಾಡಿದೆ.

ಈ ಹಿಂದೆ ಹ್ಯಾಂಪೆರಿ ಅನ್ನೋ ಬೆಕ್ಕು 1989ರಿಂದ 1997ರ ವರೆಗೆ ಒಟ್ಟು ಮೂರು ಪ್ರಧಾನಿಗಳ ಕಾಲದಲ್ಲಿ ಈ ಹುದ್ದೆ ನಿಭಾಯಿಸಿತ್ತು. ನಂತರ ನಿವೃತ್ತಿಯಾಗಿತ್ತು. ನಿವೃತ್ತಿ ಬೇರೆ ಇದೆ ಇವಕ್ಕೆ. ಈ ಬೆಕ್ಕುಗಳ ಹೆಸರಲ್ಲಿ ವಿಕಿಪಿಡೀಯ ಪೇಜ್ಗಳು ಕೂಡ ಇದಾವೆ ಅಂದ್ರೆ ಆಶ್ಚರ್ಯ ಆಗಬೋದು ನಿಮ್ಗೆ. 1500ನೇ ಇಸವಿಯಿಂದಲೂ ಬ್ರಿಟನ್​ ಸರ್ಕಾರ ಈ ರೀತಿ ಬೆಕ್ಕುಗಳನ್ನ ಮೌಸರ್​ ಅಂತಾ ಹುದ್ದೆ ಕೊಟ್ಟು ಆಫೀಸಿನಲ್ಲಿ ಇಟ್ಟುಕೊಂಡು ಬಂದಿದ್ದಾರೆ. 1920ರ ಬಳಿಕ ಇದನ್ನ ಮತ್ತಷ್ಟು ಅಫಿಶಿಯಲ್ ಮಾಡಲಾಯ್ತು. ಈ ಬೆಕ್ಕು ಒಂಥರಾ ಇಡೀ ಬ್ರಿಟನ್​ನ ಬೆಕ್ಕುಗಳಿಗೆಲ್ಲಾ ಚೀಫ್. ಈ ಲ್ಯಾರಿ ಅಂತೂ ಬರಾಕ್ ಒಬಾಮಾ ಅಧಿಕೃತ ಬ್ರಿಟನ್ ಪ್ರವಾಸದ ವೇಳೆ ಅವರ ಜೊತೆ ಭೇಟಿಯಾಗಿ ಮಾತುಕತೆ ಕೂಡ ನಡೆಸಿದೆ. ಅಲ್ಲಾ.. ಇವ್ರಿಗೆ ಇಂತದಕ್ಕೆಲ್ಲ ಟೈಮ್ ಎಲ್ಲಿಂದ ಸಿಗುತ್ತೆ ಅಂತ.

-masthmagaa.com

Contact Us for Advertisement

Leave a Reply