ಟೀಮ್ಮೇಟ್ಸ್​​ ಜೊತೆಗಿನ ಫೋಟೋ ಟ್ವೀಟ್ ಮಾಡಿ, ಕೊಹ್ಲಿ ಹೇಳಿದ್ದೇನು?

masthmagaa.com:

ಟೀಂ ಇಂಡಿಯಾ ನಾಯಕತ್ವ ವಿವಾದದ ಕುರಿತು ಮಾತಾಡೋಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ನಿರಾಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ಟೂರ್ ಆದ ಬಳಿಕ ವಿರಾಟ್ ಕೊಹ್ಲಿ ವಿರುದ್ಧ ಏನಾದ್ರೂ ಕ್ರಮ ಕೈಗೊಳ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನ ಮುಂದುವರಿಸೋದು ಬೇಡ.. ಈ ಬಗ್ಗೆ ಮಾತನಾಡೋಕೆ ನನ್ನ ಬಳಿ ಏನೂ ಇಲ್ಲ.. ಇದು ಬಿಸಿಸಿಐ ವಿಚಾರ.. ಅದೇ ಹ್ಯಾಂಡಲ್ ಮಾಡುತ್ತೆ ಬಿಡಿ ಅಂತ ಹೇಳಿದ್ದಾರೆ.

ಇನ್ನು ಕ್ಯಾಪ್ಟನ್ಸಿ ವಿಚಾರವಾಗಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿರುವಾಗಲೇ ಟೀಮ್ಮೇಟ್ಸ್ ಜೊತೆಗಿರೋ ಒಂದು ಫೋಟೋವನ್ನು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಮೊದಲ ಪ್ರಾಕ್ಟೀಸ್​ ಸೆಷನ್ ಮುಗೀತು ಅಂತ ಬರೆದುಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಟೆಸ್ಟ್​​ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

-masthmagaa.com

Contact Us for Advertisement

Leave a Reply