ಪಠ್ಯಪುಸ್ತಕ ವಿವಾದ: ಕುವೆಂಪು ನಂತ್ರ ಈಗ ಬಸವಣ್ಣನವರ ವಿಚಾರ ಕುರಿತು ವಿವಾದ

masthmagaa.com:

ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಸರಮಾಲೆ ಈಗ ದಿನದಿಂದ ದಿನಕ್ಕೇ ಕಾವು ಪಡೀತಾನೇ ಇದೆ. ಭಗತ್‌ ಸಿಂಗ್‌, ಟಿಪ್ಪು, ಹೆಗಡೇವಾರ್‌, ಕುವೆಂಪು ನಂತ್ರ ಈಗ ಜಗಜ್ಯೋತಿ ಬಸವಣ್ಣನವರ ಪಠ್ಯದ ಕುರಿತು ಈಗ ವಿವಾದ ಎದ್ದಿದೆ. 9ನೇ ತರಗತಿಯ ಸಮಾಜ ವಿಜ್ಞಾನದ ಪರಿಷ್ಕೃತ ಪಠ್ಯದಲ್ಲಿ ಬಸವಣ್ಣವರ ಕುರಿತು ಹೇಳುವಾಗ, ಬಸವಣ್ಣನವರು ತಮ್ಮ ಉಪನಯನವಾದ ನಂತ್ರ ಕೂಡಲ ಸಂಗಮಕ್ಕೆ ನಡೆದ್ರು. ಅಲ್ಲಿ ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನ ಪಡೆದು ಧ್ಯಾನ ಸಾಧನೆ ಮಾಡಿದ್ರು. ಇವ್ರು ವೀರಶೈವ ಮತವನ್ನ ಅಭಿವೃದ್ಧಿಪಡಿಸಿದ್ರು ಅಂತ ಬರೆಯಲಾಗಿದೆ. ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವ್ರು ಸಿಎಂಗೆ ಪತ್ರ ಬರೆದು ಬಸವಣ್ಣನವ್ರ ಬಗ್ಗೆ ತಪ್ಪು ಮಾಹಿತಿಯುಳ್ಳ ಪಠ್ಯವನ್ನ ತಕ್ಷಣ ಹಿಂಪಡೆದು ಪರಿಷ್ಕರಿಸಬೇಕು ಇಲ್ಲವೇ ಹಿಂದಿನ ಪ‍ಠ್ಯವನ್ನೇ ಮುಂದುವರೆಸಬೇಕು ಅಂತ ಹೇಳಿದ್ದಾರೆ. ಇನ್ನು ಜಯಮೃತ್ಯಂಜಯ ಸ್ವಾಮೀಜಿ ಕೂಡ ಪಠ್ಯದಲ್ಲಿನ ಸಾಲನ್ನ ನೋಡಿ ಎದೆಗೆ ಕಲ್ಲು ಹೊಡೆದಂತಾಯ್ತು ಅಂತ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ಶಿಕ್ಷಣ ಇಲಾಖೆ ಪ್ರತಿಕ್ರಿಯಿಸಿ, ಬಸವಣ್ಣನವರ ವಿಚಾರದಲ್ಲಿ ನಾವು ಏನು ಪರಿಷ್ಕರಣೆ ಮಾಡಿಲ್ಲ, ಇದು ಈ ಹಿಂದೆ ಮಾಡಿರೋದು ಅಂತ ಹೇಳಿದೆ. ಅತ್ತ ದೇವನೂರು ಮಹಾದೇವರ ನಂತ್ರ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಈರಣ್ಣ ಕಂಬಳಿ ಮತ್ತು‌ ಎಸ್‌.ಜಿ. ಸಿದ್ದರಾಮಯ್ಯ ಅವ್ರು ಕೂಡ ತಮ್ಮ ಕವಿತೆ, ಲಲಿತ ಪ್ರಬಂಧಗಳನ್ನ ಪಠ್ಯದಲ್ಲಿ ಪ್ರಕಟಿಸಬೇಡಿ ಅಂತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಇನ್ನು ನಾಡಗೀತೆ ತಿರುಚಿರೋ ಕುರಿತು ನಿರ್ಮಲಾನಂದನಾಥ ಸ್ವಾಮೀಜಿ ಮತ್ತೆ ಮಾತಾಡಿದ್ದು, ಈಗ ನಾಡಗೀತೆಗೆ ಅಪಮಾನ ಮಾಡಿದವ್ರು ಮುಂದೆ ರಾಷ್ಟ್ರಗೀತೆಗೂ ಅಪಮಾನ ಮಾಡಬಹುದು. ಮೊದ್ಲು ಅವ್ರ ವಿರುದ್ದ ಕ್ರಮ ಕೈಗೊಳ್ಳಿ ಅಂತ ಹೇಳಿದ್ದಾರೆ. ಇದೆಲ್ಲ ಬೆಳವಣಿಗೆ ಕುರಿತು ಇವತ್ತು ಬಿಜೆಪಿ ಸಭೆ ನಡೆಸಿದೆ. ಈ ವೇಳೆ ಪರಷ್ಕೃತ ಪಠ್ಯಪುಸ್ತಕವನ್ನ ವಿರೋಧಿಸುತ್ತಿರುವವರು ಕೇವಲ ಎಡಪಂಥೀಯರು ಅದಕ್ಕೆ ಪಠ್ಯವನ್ನ ಹಿಂಪಡೆಯುವ ಅಗತ್ಯವಿಲ್ಲ ಅಂತ ನಿರ್ಧರಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply