ಹಿಂದಿ ಬಿಗ್‌ಬಾಸ್‌ OTTಯಲ್ಲಿ ಲಿಪ್‌ಲಾಕ್‌ ಡ್ರಾಮಾ: ಟ್ರೋಲ್‌ ಆದ ಆಕಾಂಕ್ಷ ಪುರಿ !

masthmagaa.com:

ಬಿಗ್‌ಬಾಸ್‌ OTT ಸೀಸನ್‌ 2ರಲ್ಲಿ ಭಾಗವಹಿಸಿದ ಆಕಾಂಕ್ಷಾ ಪುರಿ ಲಿಪ್‌ಲಾಕ್‌ ಮಾಡೋ ಮೂಲಕ ಸುದ್ದಿಯಲ್ಲಿದ್ದಾರೆ. ಜಡ್‌ ಹಡಿದ್‌ ಎಂಬ ಮತ್ತೊಬ್ಬ ಸ್ಪರ್ಧಿ ಜೊತೆ ಕ್ಯಾಮಾರಾ ಮುಂದೆನೇ ಲಿಪ್‌ಲಾಕ್‌ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಾ ಇದೆ ಮತ್ತು ಚರ್ಚೆ ಆಗ್ತಾ ಇದೆ.

ಕೆಲ ದಿನಗಳ ಹಿಂದೆ ಜಡ್‌ ಹಡಿದ್‌ ತಮ್ಮನ್ನ ಅಸಭ್ಯವಾಗಿ ಮುಟ್ಟಿದ್ರು ಅಂತ ಆರೋಪ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಆಕಾಂಕ್ಷ ಪುರಿ ಮೂಲತಃ ತಮಿಳು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ರು. ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ. ಅಷ್ಟೆ ಅಲ್ಲ ನಟ ಕೋಮಲ್‌ ಅಭಿನಯದ ಲೊಡ್ಡೆ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಆಕಾಂಕ್ಷ ಪುರಿಯ ವರ್ತನೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply