ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಹಿನ್ನೆಡೆ: ಲೋಕ್‌ ಪೋಲ್‌

masthmagaa.com:

ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಆಲ್ಮೋಸ್ಟ್‌ ನಿಖರ ಅಂಕಿ ಅಂಶ ನೀಡಿದ್ದ ಲೋಕ್‌ ಪೋಲ್‌ ಸಮೀಕ್ಷೆ ಇದೀಗ ಲೋಕಸಭಾ ಚುನಾವಣೆ ಬಗ್ಗೇನೂ ಸಮೀಕ್ಷೆ ನಡೆಸಿದೆ. ಚುನಾವಣೆಯ ಭವಿಷ್ಯ ನುಡಿದು…ಬಿಜೆಪಿಗೆ ಶಾಕ್‌ ನೀಡಿದೆ. ಇದ್ರ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಕಾಂಗ್ರೆಸ್‌ 15-17 ಸ್ಥಾನಗಳಲ್ಲಿ ಗೆಲವು ಸಾಧಿಸುವ ಸಾಧ್ಯತೆ ಇದ್ದು, ಬಿಜೆಪಿ ಕೇವಲ 11-13 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಅಂತೇಳಿದೆ. ಅಂದ್ಹಾಗೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡ್ಕೊಂಡ ಬಿಜೆಪಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲೋಕೆ ಕನಸು ಕಾಣ್ತಿದೆ. ಕಾಂಗ್ರೆಸ್‌ ಒಂಟಿಯಾಗಿ ಸ್ಪರ್ಧೆಗೆ ಇಳಿದಿದ್ದು…ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲೋಕೆ ಕಸರತ್ತು ನಡೆಸ್ತಿದೆ.

-masthmagaa.com

Contact Us for Advertisement

Leave a Reply