ಪಾಕಿಸ್ತಾನದಲ್ಲಿ 1,300 ವರ್ಷ ಹಳೆಯ ವಿಷ್ಣು ದೇವಸ್ಥಾನ ಪತ್ತೆ..!

masthmagaa.com:

ಪಾಕಿಸ್ತಾನ: ಇಲ್ಲಿನ ಸ್ವಾತ್​ ಜಿಲ್ಲೆಯಲ್ಲಿ ಪಾಕಿಸ್ತಾನಿ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ಒಂದು ದೇಗುಲವನ್ನು ಪತ್ತೆಹಚ್ಚಿದ್ದಾರೆ. ಇದು 1300 ವರ್ಷಗಳಷ್ಟು ಹಿಂದೆ ನಿರ್ಮಿಸಲಾದ ದೇವಾಲಯವಾಗಿದೆ ಅಂತ ತಿಳಿದು ಬಂದಿದೆ. ಇಲ್ಲಿನ ಬರಿಕೋಟ್​ ಘುಂಡೈನಲ್ಲಿರೋ ಬೆಟ್ಟದಲ್ಲಿ ಉತ್ಖನನ ವೇಳೆ ಈ ದೇಗುಲ ಪತ್ತೆಯಾಗಿದೆ.

ಈ ಭಾಗದಲ್ಲಿ ಹಿಂದೂ ಶಾಹಿ ಮತ್ತು ಕಾಬೂಲ್ ಶಾಹಿಯ ಒಂದು ರಾಜ ವಂಶ ಇತ್ತು. ಅದು ಕಾಬೂಲ್​​, ಗಂಧಾರ ಮತ್ತು ವಾಯುವ್ಯ ಭಾರತವನ್ನು ಆಳುತ್ತಿತ್ತು. ಅವರ ಕಾಲದಲ್ಲೇ ಈ ದೇಗುಲ ನಿರ್ಮಾಣವಾಗಿರಬಹುದು ಅಂತ ಖೈಬರ್ ಪಕ್ತುಂಕ್ವಾ ಪ್ರಾಂತ್ಯದ ಪುರಾತತ್ವ ಇಲಾಖೆ ಮಾಹಿತಿ ನೀಡಿದೆ.

ಈ ದೇಗುಲದ ಬಳಿ ಮಿಲಿಟರಿ ಕಂಟೋನ್ಮೆಂಟ್ ಮತ್ತು ಕಾವಲು ಗೋಪುರಗಳು ಇದ್ದ ಬಗ್ಗೆಯೂ ಕುರುಹುಗಳು ಸಿಕ್ಕಿವೆ. ಪಕ್ಕದಲ್ಲೇ ಒಂದು ನೀರಿನ ಟ್ಯಾಂಕ್​ ಕೂಡ ಪತ್ತೆಯಾಗಿದ್ದು, ಪೂಜೆಗೂ ಮುನ್ನ ಆ ಟ್ಯಾಂಕಿಯ ನೀರಿನಲ್ಲೇ ಸ್ನಾನ ಮಾಡಲಾಗುತ್ತಿತ್ತು ಅಂತ ಅಧಿಕಾರಿಗಳು ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply