ಸರ್ಕಾರದ ಸಹಾಯದಿಂದ ಬೆಂಗಳೂರು ಟೆಕ್ಕಿ ಮೃತದೇಹ ಭಾರತಕ್ಕೆ…

ಥೈಲ್ಯಾಂಡ್​ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬೆಂಗಳೂರು ಮೂಲದ ಟೆಕ್ಕಿಯ ಮೃತದೇಹ ಭಾರತ ತಲುಪಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ  ಮಾಡುತ್ತಿದ್ದ 29 ವರ್ಷದ ಟೆಕ್ಕಿ ಪ್ರಗ್ಯಾ ಪಲಿವಲ್​ ಹಾಂಗ್ ಕಾಂಗ್ ಮೂಲದ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮ ನಿಮಿತ್ತ ಥೈಲ್ಯಾಂಡ್​​ಗೆ ಹೋಗಿದ್ದರು. ಆದ್ರೆ ಅಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬ ಮಧ್ಯಪ್ರದೇಶದಲ್ಲಿದ್ದು, ಯಾರೂ ಪಾಸ್​ ಪೋರ್ಟ್​ ಹೊಂದಿರಲಿಲ್ಲ. ಹೀಗಾಗಿ  ಸ್ಥಳೀಯ ಶಾಸಕ ಅಲೋಕ್ ಚತುರ್ವೇದಿ ಬಳಿ ಮನವಿ ಮಾಡಿಕೊಂಡಿದ್ದರು. ಅದರಂತೆ ಅಲೋಕ್ ಚತುರ್ವೇದಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಯಾಚಿಸಿದ್ದರು.

ನಂತರ ಮಧ್ಯಪ್ರದೇಶ ಸರ್ಕಾರ ಕೇಂದ್ರ ಸರ್ಕಾರದ ನೆರವಿನೊಂದಿಗೆ 2.2 ಲಕ್ಷ ಹಣ ಬಿಡುಗಡೆ ಮಾಡಿ, ಏಜೆನ್ಸಿಯೊಂದರ ಮೂಲಕ ಟೆಕ್ಕಿಯ ಮೃತದೇಹವನ್ನು ಭಾರತಕ್ಕೆ ತಂದಿದೆ.  ಮೊದಲಿಗೆ ಪ್ರಗ್ಯಾ ಪಲಿವಲ್ ಮೃತದೇಹವನ್ನು ಶನಿವಾರ ದೆಹಲಿ ತಂದು ನಂತರ ಆಂಬುಲೆನ್ಸ್ ಮೂಲಕ ಮಧ್ಯಪ್ರದೇಶದ ಛತ್ತಾರ್ ಪುರಕ್ಕೆ ಸಾಗಿಸಲಾಯ್ತು.

Contact Us for Advertisement

Leave a Reply