ಮಹದಾಯಿ ಕಾಮಗಾರಿಗೆ ಸುಪ್ರೀಂ ಅಸ್ತು..! ಗೋವಾಗೆ ಮುಖಭಂಗ

ದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಗೋವಾಗೆ ಮುಖಭಂಗವಾಗಿದೆ. ಯೋಜನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​​​ ವಿಲೇವಾರಿ ಮಾಡಿದೆ. ಜೊತೆಗೆ 2014ರ ಮಧ್ಯಂತರ ತೀರ್ಪನ್ನು ಪಾಲಿಸುವಂತೆ ಆದೇಶ ನೀಡಿದೆ. 2014ರಲ್ಲಿ ಈ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಧೀಕರಣ, ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಬಹುದು ಅಂತ ತೀರ್ಪು ನೀಡಿತ್ತು.

ಆದ್ರೆ ಮಹದಾಯಿ ಯೋಜನೆ ವಿರೋಧಿಸಿ ಗೋವಾ ಸರ್ಕಾರ ಸುಪ್ರೀಂಕೋರ್ಟ್​​​ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​​ನ ದ್ವಿಸದಸ್ಯ ಪೀಠ, 2014ರಲ್ಲಿ ನ್ಯಾಯಾಧೀಕರಣ ನೀಡಿದ್ದ ತೀರ್ಪು ಪಾಲಿಸಬೇಕು. ವನ್ಯಜೀವಿ ಸಂರಕ್ಷಣ ಮಂಡಳಿ ಪರಿಸರ ಮತ್ತು ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಕಾಮಕಾರಿ ಆರಂಭಿಸಿ ಅಂತ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಜಿ ಪ್ರಭುಲಿಂಗ ನಾವಡ್ಗಿ, ಗೋವಾ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅನುಮತಿ ಪಡೆದು ಕಾಮಗಾರಿ ಆರಂಭಿಸಬಹುದು. ಇದಕ್ಕಾಗಿ ಹೊಸದಾಗಿ ಡಿಪಿಆರ್ ಸಲ್ಲಿಸಿ, ನಂತರ ಕಾಮಗಾರಿ ಮುಂದುವರಿಸಬಹುದು ಅಂತ ತಿಳಿಸಿದ್ದಾರೆ.

Contact Us for Advertisement

Leave a Reply