ಒಂದೇ ದಿನಕ್ಕೆ 15 ಬಾಟಲಿ ರಕ್ತ ಕೊಟ್ಟಿದ್ರಂತೆ ಓವೈಸಿ..!

ಮಹಾರಾಷ್ಟ್ರ: ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಓವೈಸಿ, ನಾನು ಒಂದು ಸಲ ಒಂದೇ ದಿನ 15 ಬಾಟಲಿ ರಕ್ತ ದಾನ ಮಾಡಿದ್ದೆ. ಅಷ್ಟೇ ಅಲ್ಲ. ರಕ್ತ ನೀಡಲು ರೋಗಿ ಇದ್ದ ಉಸ್ಮಾನಿಯಾ ಜನರಲ್ ಆಸ್ಪತ್ರೆ ಬೆಡ್ ವರೆಗೆ ಬಾಟಲಿ ಹಿಡಿದು ಓಡಿದ್ದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಯಾರೋ ಒಬ್ಬರು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದು, ನೆಟ್ಟಿಗರು ಓವೈಸಿಯನ್ನು ವ್ಯಂಗ್ಯ ಮಾಡುತ್ತಿದ್ದಾರೆ.

 

Contact Us for Advertisement

Leave a Reply