18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರಗಳೇ ಲಸಿಕೆ ಕೊಡಿಸಬೇಕು!

masthmagaa.com:

ಮೇ 1ರಿದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದ್ರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಟ್ಟಿರೋ ಉಚಿತ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ನೀಡಬೇಕು. 18ರಿಂದ 45 ವರ್ಷದವರಿಗೆ ಲಸಿಕೆ ಉಚಿತವಾಗಿ ನೀಡೋದಾದ್ರೆ ಅದನ್ನು ರಾಜ್ಯ ಸರ್ಕಾರಗಳೇ ಖರೀದಿಸಿ ಕೊಡಬೇಕು ಅಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಅಂದ್ರೆ ರಾಜ್ಯದಲ್ಲಿ ಉಚಿತವಾಗಿ ಲಸಿಕೆ ನೀಡೋದಾಗಿ ಘೋಷಿಸಿರೋ ರಾಜ್ಯ ಸರ್ಕಾರಗಳು ನೇರವಾಗಿ ಲಸಿಕೆ ಉತ್ಪಾದಕ ಕಂಪನಿಗಳಿಂದ ಲಸಿಕೆ ಖರೀದಿಸಿ ಜನರಿಗೆ ಲಸಿಕೆ ಹಾಕಿಸಬೇಕಾಗುತ್ತೆ. ಅಂದಹಾಗೆ ಇಂದು ಸಂಜೆ 4 ಗಂಟೆ ಬಳಿಕ 18 ವರ್ಷ ಮೇಲ್ಪಟ್ಟವರು ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಅಪ್ಲಿಕೇಷನ್​​ನಲ್ಲಿ ಲಸಿಕೆಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದು..

-masthmagaa.com

Contact Us for Advertisement

Leave a Reply