ಚುನಾವಣೆಯಲ್ಲಿ ಸೋತ ಘಟಾನುಘಟಿ ನಾಯಕರು..! ಯಾರು ಗೊತ್ತಾ..?

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಫಲಿತಾಂಶ ಹೊರಬಿದ್ದಿದೆ. ಈಗ ಸೋತ ಪಕ್ಷಗಳಲ್ಲಿ ಸೋಲಿನ ಪರಾಮರ್ಶೆ ಕೂಡ ಶುರುವಾಗಿದೆ. ವಿಶೇಷ ಅಂದ್ರೆ ಈ ಬಾರಿ ಎರಡೂ ರಾಜ್ಯಗಳಲ್ಲಿ ದಿಗ್ಗಜರು ಎನ್ನಿಸಿಕೊಂಡ ನಾಯಕರೇ ಸೋತುಹೋಗಿದ್ದಾರೆ.

ಮೊದಲಿಗೆ ಹರಿಯಾಣದ ಕಥೆ ನೋಡೋದಾದ್ರೆ, ಇಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಹೋಗಿದ್ದ ಮಹೇಂದ್ರ ಗಢದಲ್ಲಿ ಬಿಜೆಪಿಯ ರಾಮ್​ ಬಿಲಾಸ್ ಶರ್ಮಾ ಸೋತಿದ್ದಾರೆ. ಇವರು ಶಿಕ್ಷಣ ಸೇರಿದಂತೆ ಒಟ್ಟು 7 ಖಾತೆಗಳನ್ನು ನಿರ್ವಹಿಸುತ್ತಿದ್ದ ಸಚಿವರಾಗಿದ್ದರು. ಇವರ ವಿರುದ್ಧ ಕಾಂಗ್ರೆಸ್​​ನ ರಾವ್​ ದಾನ್ ಸಿಂಹ ಗೆಲುವು ದಾಖಲಿಸಿದ್ದಾರೆ. ಇನ್ನು ನಾರಾನೌಂದ್ ಕ್ಷೇತ್ರದ ಕ್ಯಾಪ್ಟನ್ ಅಭಿಮನ್ಯು ಸಿಂಹ ಅವರನ್ನು ಜನನಾಯಕ ಪಕ್ಷದ ರಾಮ್​ ಕುಮಾರ್ ಗೌತಮ್ ಅವರು ಸೋಲಿಸಿದ್ದಾರೆ. ಇವರ ಬಳಿ ಹಣಕಾಸು ಸೇರಿದಂತೆ 8 ಪ್ರಮುಖ ಖಾತೆಗಳಿದ್ದವು. ಇನ್ನು ಬಾದಲಿ ಕ್ಷೇತ್ರದಲ್ಲಿ ಬಿಜೆಪಿಯ ಓಂ ಪ್ರಕಾಶ್ ಘನ್​ಖಡ್​​​​ ಅವರನ್ನು ಕಾಂಗ್ರೆಸ್​​ನ ಕುಲದೀಪ್ ವತ್ಸ್​​ ಸೋಲಿಸಿದ್ದಾರೆ. ಇವರ ಬಳಿ ಕೃಷಿ ಸೇರಿದಂತೆ 5 ಖಾತೆಗಳಿದ್ದವು.

ಇನ್ನು ಮಹಾರಾಷ್ಟ್ರದಲ್ಲಿ ಸೋತವರು ಯಾರು ಅನ್ನೋದನ್ನ ನೋಡೋದಾದ್ರೆ, ಇಲ್ಲಿ ಸಚಿವರಾಗಿದ್ದ ಬಿಜೆಪಿಯ ಪಂಕಜಾ ಮುಂಡೆ, ಅನಿಲ್ ಬೊಂಡೇ,  ರಾಮಶಂಕರ್ ಶಿಂಧೆ ಶಿವಸೇನೆಯ ಜಯದತ್ತಾ ಜೀ ಸೇರಿದಂತೆ ಹಲವರು ಸೋಲು ಅನುಭವಿಸಿದ್ದಾರೆ.

Contact Us for Advertisement

Leave a Reply