ಸಿಎಂ ಗಾದಿಗಾಗಿ ಬಿಜೆಪಿ-ಶಿವಸೇನೆ ನಡುವೆ ಶುರುವಾಗುತ್ತಾ ‘ಮಹಾ‘ಕದನ..?

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಗೆ ಬಹುಮತ ಸಿಗುತ್ತಿದ್ದಂತೆ ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ಶುರುವಾದಂತಿದೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್ ಪರೋಕ್ಷವಾಗಿ ಆದಿತ್ಯ ಠಾಕ್ರೆಯನ್ನು ಸಿಎಂ ಮಾಡುವ ಸುಳಿವು ಕೊಟ್ಟಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ನಾನು ಉದ್ಧವ್ ಠಾಕ್ರೆ ಭೇಟಿಯಾಗಲು ಹೊರಟಿದ್ದೇನೆ. ನಮ್ಮ ಸಂಖ್ಯೆ ತುಂಬಾ ಕಡಿಮೆ ಬಂದಿಲ್ಲ. ಚೆನ್ನಾಗಿಯೇ ಇದೆ. ನಾವು ಬಿಜೆಪಿಯೊಂದಿಗೆ ಮೊದಲಿನಂತೆ ಮೈತ್ರಿ ಮುಂದುವರಿಸುತ್ತೇವೆ. 50-50 ಫಾರ್ಮುಲಾದಲ್ಲಿ ಮುಂದುವರಿಯುತ್ತೇವೆ ಎಂದಿದ್ದಾರೆ. ಇನ್ನು ಆದಿತ್ಯ ಠಾಕ್ರೆಯವರನ್ನು ಸಿಎಂ ಮಾಡ್ತೀರಾ ಎಂದು ಕೇಳಿದಾಗ, ಈಗ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿ ಚರ್ಚಿಸಿ, ನಿರ್ಧರಿಸುತ್ತೇವೆ ಎಂದಿದ್ದಾರೆ.

ಸದ್ಯ ವಾರ್ಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಆದಿತ್ಯಠಾಕ್ರೆ ಭರ್ಜರಿ ಮುನ್ನಡೆ ಸಾಧಿಸಿದ್ದು, ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

Contact Us for Advertisement

Leave a Reply