ಆಸ್ಟ್ರೇಲಿಯಾದಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ! ನಾಚಿಕೆಗೇಡು ಎಂದ ಮಾರಿಸನ್

masthmagaa.com:

ಭಾರತ ಸರ್ಕಾರ ಆಸ್ಟ್ರೇಲಿಯಾಗೆ ನೀಡಿದ್ದ ಮಹಾತ್ಮಾ ಗಾಂಧಿಯ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಪ್ರಧಾನಿ ಸ್ಕಾಟ್ ಮಾರಿಸನ್ ಈ ಕೃತ್ಯವನ್ನು ನಾಚಿಕೆಗೇಡು ಎಂದು ಕರೆದಿದ್ದು, ಇಂಥಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯಾರು ಈ ಕೃತ್ಯ ಎಸಗಿದ್ದಾರೋ ಅವರು ಆಸ್ಟ್ರೇಲಿಯಾದಲ್ಲಿರೋ ಭಾರತೀಯ ಸಮುದಾಯದ ಜನರಿಗೆ ಅಪಮಾನ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಕಾನ್ಸುಲ್ ಜನರಲ್ ಆಫ್ ಇಂಡಿಯಾ ರಾಜ್​ಕುಮಾರ್ ಮತ್ತು ಇತರೆ ಆಸ್ಟ್ರೇಲಿಯಾ ನಾಯಕರು ಒಂದು ಕಾರ್ಯಕ್ರಮ ಆಯೋಜಿಸಿದ್ರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಕಾಟ್ ಮಾರಿಸನ್​, ರಾವಿಲ್ಲಿಯ ಭಾರತೀಯ ಸಮುದಾಯ ಕೇಂದ್ರದ ಬಳಿ ಈ ಮೂರ್ತಿಯನ್ನು ಅನಾವರಣಗೊಳಿಸಿದ್ರು. ಇದಾದ ಕೆಲ ಹೊತ್ತಿನ ಬಳಿಕ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

-masthmagaa.com

Contact Us for Advertisement

Leave a Reply