ಮಲಾಲಾಗೆ ಮದ್ವೆಯಾಯ್ತು.. ಗಂಡ ಯಾರು ಗೊತ್ತಾ?

masthmagaa.com:

ನೋಬೆಲ್​ ಶಾಂತಿ ಪುರಸ್ಕೃತೆ ಮತ್ತು ಮಹಿಳಾ ಹಕ್ಕು ಹೋರಾಟಗಾತಿ ಮಲಾಲಾ ಯುಸುಫ್​ಝೈ ಮದ್ವೆಯಾಗಿದ್ದಾರೆ. ಅಸ್ಸರ್​ ಮಲಿಕ್​ ಅನ್ನೋರನ್ನ ಮದ್ವೆಯಾಗಿದ್ದಾರೆ. ಯುನೈಟೆಡ್​​ ಕಿಂಗ್ಡಮ್​​ನ ಬರ್ಮಿಂಗ್​ಹ್ಯಾಂನಲ್ಲಿರೋ ಮಲಾಲಾ ಅವರ ನಿವಾಸದಲ್ಲಿ ಸರಳವಾಗಿ ಮದ್ವೆ ಕಾರ್ಯಕ್ರಮ ನೆರವೇರಿದೆ. ನಮಗೆ ಆಶೀರ್ವಾದ ಮಾಡಿ ಅಂತ ಮಲಾಲಾ ಯುಸುಫ್​ಝೈ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪತಿ ಬಗ್ಗೆ ಮಲಾಲಾ ಹೆಸರನ್ನ ಬಿಟ್ಟು ಹೆಚ್ಚಿನ ಮಾಹಿತಿ ನೀಡಿಲ್ಲ. ಆದ್ರೆ ಈ ಅಸ್ಸರ್​ ಮಲಿಕ್​ ಪಾಕಿಸ್ತಾನ್​ ಕ್ರಿಕೆಟ್​ ಬೋರ್ಡ್​​ನ ಹೈ ಪರ್ಫಾಮೆನ್ಸ್​ ಸೆಂಟರ್​​ನ ಜನರಲ್​ ಮ್ಯಾನೇಜರ್ ಅಂತ ನೆಟ್ಟಿಗರು ಕಂಡು ಹಿಡಿದಿದ್ಧಾರೆ. ಅಂದ್ಹಾಗೆ ಪಾಕಿಸ್ತಾನ ಮೂಲದ ಮಲಾಲಾಗೆ 2014ರಲ್ಲಿ ಭಾರತದ ಕೈಲಾಶ್​​ ಸತ್ಯಾರ್ಥಿ ಜೊತೆ ನೋಬೆಲ್​ ಶಾಂತಿ ಪ್ರಶಸ್ತಿ ಸಿಕ್ಕಿತ್ತು. ಆಗ ಮಲಾಲಾಗೆ ಕೇವಲ 17 ವರ್ಷ ವಯಸ್ಸು. ಈ ಮೂಲಕ ನೋಬೆಲ್​ ಪೀಸ್​ ಪ್ರೈಸ್​ ಗೆದ್ದ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ರು. ಈ ಮಲಾಲಾ ಯುಸುಫ್​ಝೈ 2009ರಲ್ಲೇ ಅಂದ್ರೆ 12 ವರ್ಷದ ಬಾಲಕಿಯಾಗಿದ್ದಾಗಲೇ ಪಾಕಿಸ್ತಾನದ ಸ್ವಾಟ್​ ಕಣಿವೆಯಲ್ಲಿ ತಾಲಿಬಾನಿಗಳ ಅಟ್ಟಹಾಸದ ಬಗ್ಗೆ ಬಿಬಿಸಿಯಲ್ಲಿ ಬರೆಯುತ್ತಿದ್ದರು. ಈಕೆಯ ಬಾಯಿಯನ್ನ ಮುಚ್ಚಿಸಬೇಕು ಅಂತ 2012ರಲ್ಲಿ ಒಂದ್ಸಲ ಪಾಕಿಸ್ತಾನ್​ ತಾಲಿಬಾನ್​ ಸಂಘಟನೆ ಈಕೆಯ ತಲೆಗೆ ಗುಂಡು ಹಾರಿಸಿತ್ತು. ಅದೃಷ್ಟವಶಾತ್​ ಬಾಲಕಿ ಮಲಾಲಾ ಚಿಕಿತ್ಸೆ ಪಡೆದು ಬದುಕುಳಿದಿದ್ದಳು. ಹೀಗೆ ತಾಲಿಬಾನಿಗಳನ್ನ ಎದುರು ಹಾಕ್ಕೊಂಡು ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೋರಾಡಿದ ಮಲಾಲಾ ಸದ್ಯ ಯುನೈಟೆಡ್​ ಕಿಂಗ್ಡಮ್​​ನಲ್ಲಿ ಸೆಟಲ್​ ಆಗಿದ್ದಾರೆ.

-masthmagaa.com

Contact Us for Advertisement

Leave a Reply