ಪ್ರವಾಸಿಗರಿಲ್ಲದೇ ಕಂಗಾಲು: ಭಾರತ ನೀನು ಬಾ ಅಂದ ಮಾಲ್ಡೀವ್ಸ್!

masthmagaa.com:

ಭಾರತದ ಜೊತೆ ಮುನಿಸಿಕೊಂಡು ತನ್ನ ಪ್ರವಾಸೋದ್ಯಮ ಇಲಾಖೆಗೆ ಭಾರಿ ಪೆಟ್ಟು ತಂದ್ಕೊಂದಿರೊ ಮಾಲ್ಡೀವ್ಸ್‌ ಈಗ ಮತ್ತೆ ಹೊಸ ನಾಟಕ ಆರಂಭಿಸಿದೆ. ಸದ್ಯ ಪ್ರವಾಸಿಗರಿಲ್ಲದೇ ತನ್ನ ದೇಶದ ಪ್ರಮುಖ ಆದಾಯಕ್ಕೆ ತಾನೇ ಅಪಾಯ ತಂದ್ಕೊಂಡಿರೊ ಮಾಲ್ಡೀವ್ಸ್‌ ಈಗ ಭಾರತದ ಪ್ರವಾಸಿಗರನ್ನ ತನ್ನತ್ತ ಮರಳಿ ಸೆಳೆಯಲು ಪ್ಲ್ಯಾನ್‌ವೊಂದನ್ನ ಮಾಡಿದೆ. ಅದ್ರ ಭಾಗವಾಗಿ ಮಾಲ್ಡೀವ್ಸ್‌ ಭಾರತದಲ್ಲಿ ರೋಡ್‌ ಶೋ ನಡೆಸಲು ಚಿಂತನೆ ನಡೆಸಿದೆ. ಅಲ್ದೇ ಈ ವಿಚಾರವಾಗಿ ಮಾಲ್ಡೀವ್ಸ್‌ನಲ್ಲಿರೊ ಭಾರತದ ರಾಯಭಾರಿ ಅಧಿಕಾರಿ ಮುನು ಮಹಾವರ್‌ರನ್ನ ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ (MATATO) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಮಾಲ್ಡೀವ್ಸ್‌ ಪ್ರವಾಸೋದ್ಯಮ ಮತ್ತೆ ಲಾಭದಾಯಕ ಹಂತದತ್ತ ಸಾಗಲು ಭಾರತೀಯರ ಅವಶ್ಯಕತೆ ಇದೆ ಅನ್ನೊದನ್ನ ಮಾಲ್ಡೀವ್ಸ್‌ ಸಾಬೀತು ಮಾಡಿದೆ. ಅಂದ್ಹಾಗೆ ಈ ವರ್ಷ ಜನವರಿ 6ರಂದು ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ವೇಳೆ ಮಾಲ್ಡೀವ್ಸ್‌ ಅಧಿಕಾರಿಗಳು ಮೋದಿ ಅವ್ರನ್ನ ನಿಂದಿಸಿದ್ರು. ಹೀಗಾಗಿ ಭಾರತ-ಮಾಲ್ಡೀವ್ಸ್‌ ಸಂಬಂಧದಲ್ಲಿ ದೊಡ್ಡ ಬಿರುಕು ಮೂಡಿತ್ತು. ಅಲ್ದೇ ಮಾಲ್ಡೀವ್ಸ್‌ಗೆ ಭೇಟಿ ನೀಡೊರ ಲಿಸ್ಟ್‌ನಲ್ಲಿ ಫಸ್ಟ್‌ನಲ್ಲಿದ್ದ ಭಾರತ 6ನೇ ಸ್ಥಾನಕ್ಕೆ ಕುಸಿದು, ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಕೊಟ್ಟಿತ್ತು. ಹೀಗಾಗಿ ತನ್ನ ದೇಶದ ಪ್ರಮುಖ ಆದಾಯವಾಗಿರೊ ಪ್ರವಾಸೋದ್ಯಮ ಕ್ಷೇತ್ರದ ಲಾಭಕ್ಕಾಗಿ ಮರಳಿ ಮಾಲ್ಡೀವ್ಸ್‌ ಭಾರತದ ಕಾಲು ಹಿಡಿಯೊಕೆ ಬರ್ತಿದೆ.

-masthmagaa.com

Contact Us for Advertisement

Leave a Reply