ಛೀ…4 ವರ್ಷಗಳಿಂದ ತನ್ನದೇ ಮೂತ್ರ ಸೇವಿಸ್ತಿದ್ದಾನೆ ಈ ಭೂಪ..! ಯಾಕೆ ಗೊತ್ತಾ..?

ಇಂಗ್ಲೆಂಡ್: ಮ್ಯಾನ್ ವರ್ಸಸ್ ವೈಲ್ಡ್​ ಕಾರ್ಯಕ್ರಮದಲ್ಲಿ ಬಿಯರ್ ಗ್ರಿಲ್ಸ್​​​​ ತನ್ನ ಮೂತ್ರವನ್ನು ತಾವೇ ಕುಡಿಯೋದು ನೀವೆಲ್ಲಾ ನೋಡಿರ್ತೀರಿ. ಆದ್ರೆ ಇಲ್ಲೊಬ್ಬ ವ್ಯಕ್ತಿ 4 ವರ್ಷಗಳಿಂದ ತನ್ನ ಮೂತ್ರವನ್ನು ತಾನೇ ಕುಡಿಯುತ್ತಿದ್ದಾನೆ. 32 ವರ್ಷದ ಹೈರಿ, ಇಂಗ್ಲೆಂಡ್​ನ ಹ್ಯಾಂಪ್​​ಶಾಯರ್​ನ ನಿವಾಸಿಯಾಗಿದ್ದಾರೆ. ಈತ ಪ್ರತಿದಿನ 200 ಎಂಎಲ್ ಮೂತ್ರವನ್ನು ಬಿಯರ್ ರೀತಿ ಕುಡಿಯುತ್ತಿದ್ದಾನೆ. ಈತ ಕುಡಿಯೋ ಮೂತ್ರ ಒಂದು ವಾರದಿಂದ ಹಿಡಿದು, ಒಂದು ತಿಂಗಳವರೆಗೆ ಹಳೆಯದ್ದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೈರಿ, ಈ ರೀತಿ ಮೂತ್ರ ಸೇವಿಸೋದರಿಂದ ಮಾನಸಿಕ ಖಿನ್ನತೆ ಕಡಿಮೆಯಾಗೋದರ ಜೊತೆಗೆ ಯೌವನವನ್ನು ಕಾಪಾಡುತ್ತೆ ಅಂತ ಹೇಳಿದ್ದಾನೆ. ಹೈರಿ ಪ್ರಕಾರ, ಹಳೆಯ ಮೂತ್ರದಲ್ಲಿ ವಯಸ್ಸಿಗೆ ವಿರುದ್ಧವಾದ ಅಂಶಗಳಿದ್ದು, ಅದನ್ನು ಕುಡಿದರೆ ವಯಸ್ಸಾಗಿದ್ದು ಗೊತ್ತೇ ಆಗಲ್ವಂತೆ. ಅಲ್ಲದೆ 4 ವರ್ಷಗಳಿಂದ ಪ್ರತಿದಿನ ಬೆಳಗ್ಗೆ ಈ ರೀತಿ ಮೂತ್ರ ಸೇವಿಸುತ್ತಿದ್ದು, ಇದ್ರಿಂದ ಆರೋಗ್ಯ ಮತ್ತು ಬುದ್ಧಿ ಚುರುಕಾಗುತ್ತೆ ಅಂತ ಹೇಳಿದ್ದಾನೆ.

Contact Us for Advertisement

Leave a Reply