ಪತಿಗೆ ಮೋಸ ಮಾಡಿದ ಪತ್ನಿ..ಪ್ರಿಯಕರನಿಂದ 6 ಕೋಟಿ ಪಡೆದ ಗಂಡ..!

ತನಗೆ ಮೋಸ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಪತಿಯೊಬ್ಬರು 6 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ಅಮೆರಿಕಾದ ಕೆರೋಲಿನಾದಲ್ಲಿ ಈ ಘಟನೆ ನಡೆದಿದೆ. ಕೇವಿನ್ ಹಾರ್ವರ್ಡ್ ಎಂಬ ವ್ಯಕ್ತಿ ಹೋಮ್ ರೇಕರ್ ಎಂಬ ಕಾನೂನಿನ ಸಹಾಯದಿಂದ ಮೋಸ ಮಾಡಿದ ಹೆಂಡ್ತಿ ಮತ್ತಾಕೆಯ ಪ್ರಿಯಕರನ ವಿರುದ್ಧ ಕೇಸ್ ದಾಖಲಿಸಿ, 6 ಕೋಟಿ ರೂಪಾಯಿ ಗೆದ್ದಿದ್ದಾರೆ.

ಕೇವಿನ್ 12 ವರ್ಷಗಳ ಹಿಂದೆ ಮದ್ವೆಯಾಗಿದ್ರು. ಆದ್ರೆ ಅವರ ಪತ್ನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆತ ಮನೆಗೂ ಬರುತ್ತಿದ್ದ. ಆದ್ರೆ ಕೇವಿನ್ ಆತ ತನ್ನ ಪತ್ನಿಯ ಒಳ್ಳೆಯ ಸ್ನೇಹಿತ ಎಂದು ತಿಳಿದಿದ್ದರು. ಆತ ಪ್ರತಿದಿನ ರಾತ್ರಿ ಡಿನ್ನರ್‍ಗೆ ಕೇವಿನ್ ಮನೆಗೆ ಬರುತ್ತಿದ್ದ. ಆದ್ರೆ ಕಾಲ ಕಳೆದಂತೆ ಕೇವಿನ್‍ಗೆ ತನ್ನ ಪತ್ನಿ ಮೇಲೆ ಅನುಮಾನ ಬಂತು. ಹೀಗಾಗಿಯೇ ಪತ್ನಿ ಮೇಲೆ ಗೂಢಾಚಾರಿಗಳನ್ನು ನೇಮಿಸಿದ್ರು. ಆಗ ಕೇವಿನ್ ಪತ್ನಿಗೆ ಸಹೋದ್ಯೋಗಿ ಜೊತೆ ಸಂಬಂಧ ಇರೋದು ಗೊತ್ತಾಯ್ತು. ಆದ್ರೆ ಕೇವಿನ್ ಒಂದೂ ಮಾತಾಡಲಿಲ್ಲ. ಸೀದಾ ಹೋಗಿ ಹೋಮ್‍ರೇಕರ್ ಕಾನೂನಿನ ಅನ್ವಯ ಕೇಸ್ ದಾಖಲಿಸಿದ್ದಾರೆ. ಕೊನೆಗೂ ಕೋರ್ಟ್ ಕೇವಿನ್ ಹಾರ್ವರ್ಡ್ ಪರ ತೀರ್ಪು ನೀಡಿದೆ. ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ 6 ಕೋಟಿ 56 ಲಕ್ಷ ರೂಪಾಯಿ ಕೊಡಬೇಕಾಗಿದೆ.

ಬೇರೆಯವರ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಿವುದು, ಜೋಡಿಯನ್ನು ಬೇರೆ ಮಾಡುವವರಿಗೆ ಶಿಕ್ಷೆ ವಿಧಿಸಲು ಹೋಮ್‍ರೇಕರ್ ಕಾನೂನು ಜಾರಿಗೆ ತರಲಾಗಿತ್ತು.

Contact Us for Advertisement

Leave a Reply