ಒಂದೇ ಕುಟುಂಬದ ನಾಲ್ವರ ಸಾವಿನ ಹಿಂದೆ ‘ಮತಾಂತರ’ದ ವಿಷ?

masthmagaa.com:
ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು ಪ್ರಕರಣದಲ್ಲಿ ನೂರ್ ಜಹಾನ್​ ಎಂಬ ಮಹಿಳೆ ಮತಾಂತರ ಮಾಡಲು ಯತ್ನಿಸಿದ್ದು ದೃಢವಾಗಿದ್ದು, ಆಕೆಯನ್ನ ಅರೆಸ್ಟ್ ಮಾಡಲಾಗಿದೆ ಅಂತ ಮಂಗಳೂರು ನಗರ ಪೊಲೀಸ್ ಕಮಿಷನರ್​ ಶಶಿಕುಮಾರ್​ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ನಾಗೇಶ್​ ಎಂಬಾತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದು. ನಾಗೇಶ್​​ಗೆ ಡೈವೋರ್ಸ್ ಕೊಡು, ನಾನು ಮುಸ್ಲಿಂ ಹುಡುಗನ ಜೊತೆ ನಿನ್ನ ಮದ್ವೆ ಮಾಡಿಸ್ತೀನಿ ಅಂತ ಮುಸ್ಲಿಮರ ಮದ್ವೆ ಬ್ರೋಕರ್ ಆಗಿದ್ದ ನೂರ್ ಜಹಾನ್​ ಹೇಳಿದ್ದಳು. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಆಕೆಯನ್ನ ಅರೆಸ್ಟ್ ಮಾಡಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಅತ್ತ ನೂರ್​ ಜಹಾನ್​ ಕುಟುಂಬಸ್ಥರು ಹೇಳ್ತಿರೋದೇ ಬೇರೆ. ನೂರ್ ಜಹಾನ್​ ಪುತ್ರಿ ಮಾತನಾಡಿ, ನಮ್ಮ ತಾಯಿ ಮದುವೆಗಳಿಗೆ ಸಂಬಂಧ ನೋಡೋ ಕೆಲಸ ಮಾಡ್ತಿದ್ರು. ಆದ್ರೆ ನಮ್ಮ ಧರ್ಮಕ್ಕೆ ಯಾರನ್ನೂ ಮತಾಂತರ ಮಾಡಿಲ್ಲ, ಮಾಡ್ತಿರಲಿಲ್ಲ. ದ್ವೇಷಕ್ಕೋಸ್ಕರ ತಾಯಿ ಮೇಲೆ ಈ ರೀತಿ ಆರೋಪ ಮಾಡಲಾಗ್ತಿದೆ ಎಂದಿದ್ದಾರೆ.
ದರ ನಡುವೆ ರಾಜ್ಯದಲ್ಲಿ ಬಲವಂತದ ಮತಾಂತರ ತಡೆಯುವ ಉದ್ದೇಶದಿಂದ ಕಾಯ್ದೆಯೊಂದನ್ನ ಜಾರಿಗೆ ತರಲು ರಾಜ್ಯ ಸರ್ಕಾರ ತಯಾರಿ ನಡೆಸಿದ್ದು, ಇದಕ್ಕೆ ಪೂರಕವಾದ ಮಸೂದೆಯನ್ನ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದನ್ನ ಬಿಜೆಪಿ ನಾಯಕರು ಸಮರ್ಥಿಸಿಕೊಂಡ್ರೆ, ಕಾಂಗ್ರೆಸ್​ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್​, ಖಾಸಗಿಯಾಗಿ ಮತ್ತು ಸರ್ಕಾರದ ವತಿಯಿಂದ ಮಸೂದೆ ಮಂಡನೆ ಮಾಡುವ ಉದ್ದೇಶ ಬಿಜೆಪಿಯದ್ದ. ಯಾವುದೇ ರೂಪದಲ್ಲಿ ಮಸೂದೆ ತಂದರೂ ನಾವು ವಿರೋಧಿಸ್ತೀವಿ ಅಂತ ಹೇಳಿದ್ದಾರೆ.
ಹೀಗೆ ಮತಾಂತರ ನಿಷೇಧದ ಬಗ್ಗೆ ಪರ ವಿರೋಧ ಚರ್ಚೆ ನಡೀತಿರುವಾಗಲೇ ಕ್ರಿಶ್ಚಿಯನ್​ ನಿಯೋಗವೊಂದು ಇವತ್ತು ಸಿಎಂ ಬಸವರಾಜ ಬೊಮ್ಮಾಯಿಯನ್ನ ಭೇಟಿ ಮಾಡ್ತು. ಈ ವೇಳೆ ಮತಾಂತರ ನಿಷೇಧ ಕಾಯ್ದೆ ಬೇಡ ಅಂತ ಮನವಿ ಮಾಡಿದೆ.
-masthmagaa.com

Contact Us for Advertisement

Leave a Reply