ಪಾಕ್​​​ಗೆ ಬರಲು ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ: ಪಾಕಿಸ್ತಾನ

ಪಾಕಿಸ್ತಾನ: ಭಾರತ ಮತ್ತು ಪಾಕಿಸ್ತಾನದ ಸಿಖ್ ಧರ್ಮೀಯರ ಪವಿತ್ರ  ಕ್ಷೇತ್ರ ಕರ್ತಾರ್‌ಪುರ್‌ ಕಾರಿಡಾರ್ ಉದ್ಘಾಟನೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿದ್ದು, ಅವರು ಬರಲು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಗುರುನಾನಕ್ 550 ನೇ ಜಯಂತಿಯಂದು ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆಯಾಗಲಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವ ಮೊಹ್ಮದ್ ಖುರೇಷಿ, ಡಾ. ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ ಈಗಾಗಲೇ  ಮನಮೋಹನ್ ಈ ಸಂಬಂಧ ತಮಗೆ ಪತ್ರ ಬರೆದಿದ್ದು, ಪತ್ರದಲ್ಲಿ, ಮುಖ್ಯ ಅತಿಥಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕರ್ತಾರ್‌ಪುರಕ್ಕೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.

ಆದ್ರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೊದಲಿಗೆ ಪಾಕಿಸ್ತಾನದ ಈ ಆಫರ್​​ನ್ನು ನಿರಾಕರಿಸಿದ್ದರು. ಆದ್ರೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಹ್ವಾನ ನೀಡಿದಾಗ ಪಾಕ್​​ಗೆ ತೆರಳಲು ಒಪ್ಪಿಕೊಂಡಿದ್ದರು.

Contact Us for Advertisement

Leave a Reply