ರಂಜಾನ್ ಬಗ್ಗೆ ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?

masthmagaa.com:

ದೆಹಲಿ: ರಂಜಾನ್​​ನ ಈ ಪವಿತ್ರ ತಿಂಗಳಲ್ಲಿ ಹಬ್ಬಕ್ಕೂ ಮುನ್ನವೇ ಈ ಮಹಾಮಾರಿ ತೊಲಗಲಿ ಎಂದು ಪ್ರಾರ್ಥನೆ ಮಾಡೋಣ ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.  ಮನ್​​ ಕಿ ಬಾತ್​ನಲ್ಲಿ ಈ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ,  ರಂಜಾನ್​​ನ ಪವಿತ್ರ ತಿಂಗಳು ಶುರುವಾಗಿದೆ. ರಂಜಾನ್ ವೇಳೆ ಇಂತಹ ಸಂಕಷ್ಟವೊಂದು ಎದುರಾಗುತ್ತೆ ಎಂದು ಯಾರೂ ಭಾವಿಸಿರಲಿಲ್ಲ.. ಆದ್ರೆ ಈಗ ವಿಶ್ವವನ್ನೇ ಸಂಕಷ್ಟ ಆವರಿಸಿದ್ದು,ನಾವು ಸೇವಾ ಮನೋಭಾವನೆಯಿಂದ ಮುಂದುವರಿಯಬೇಕು.. ರಂಜಾನ್ ಹಬ್ಬಕ್ಕೂ ಮುನ್ನವೇ ಈ ಮಹಾಮಾರಿ ತೊಲಗಿ, ಅದ್ಧೂರಿಯಾಗಿ ಹಬ್ಬ ಆಚರಿಸುವಂತೆ ಆಗಲಿ ಎಂದು ನಾವು ಪ್ರಾರ್ಥಿಸಬೇಕಿದೆ ಅಂದ್ರು. ರಂಜಾನ್ ವೇಳೆ ಸಾಮಾಜಿಕ ಅಂತರವನ್ನು ನೆನಪಿನಲ್ಲಿಡಬೇಕು.. ಸೇವೆ ಮತ್ತು ಸಂಯಮದ ಮನೋಭಾವನೆಯೊಂದಿಗೆ ರಂಜಾನ್ ಆಚರಿಸಬೇಕು.. ಸರ್ಕಾರ ನೀಡಿರುವ ಸೂಚನೆಗಳನ್ನು ಮುಸ್ಲಿಮರು ಪಾಲಿಸ್ತಾರೆ ಅನ್ನೋ ವಿಶ್ವಾಸ ನನಗಿದೆ ಅಂತ ಹೇಳಿದ್ರು.

ಇದೇ ವೇಳೆ ಅಕ್ಷಯ ತೃತೀಯದ ಬಗ್ಗೆ ಮಾತನಾಡಿದ ಅವರು,  ಪಾಂಡವರಿಗೆ ಇದೇ ದಿನದಂದು ಅಕ್ಷಯ ಪಾತ್ರೆ ಸಿಕ್ಕಿತ್ತು. ಅದರಲ್ಲಿ ಆಹಾರ ಯಾವತ್ತೂ ಖಾಲಿ ಆಗುತ್ತಲೇ ಇರಲಿಲ್ಲ. ಈಗ ರೈತರು ಕೂಡ ದೇಶದ ಜನತೆಗೆ ಆಹಾರದ ಕೊರತೆ ಎದುರಾಗಬಾರದು ಅನ್ನೋ ಉದ್ದೇಶದಿಂದ ಕಠಿಣ ಪರಿಶ್ರಮಪಡ್ತಿದ್ಧಾರೆ. ಇಂದಿನ ಅಕ್ಷಯ ತೃತೀಯದ ಸಮಯದಲ್ಲಿ ನಾವು ಪರಿಸರ, ಅರಣ್ಯ, ನದಿಗಳ ಬಗ್ಗೆ ಚಿಂತಿಸಬೇಕು.. ಯಾಕಂದ್ರೆ ಅವುಗಳು ಜೀವಂತವಾಗಿದ್ದರೆ ಮಾತ್ರ ಭೂಮಿ ಜೀವಂತವಾಗಿರುತ್ತೆ. ಭೂಮಿ ಜೀವಂತವಾಗಿದ್ದರೆ ಮಾತ್ರ ನಾವು ಜೀವಂತವಾಗಿರಲು ಸಾಧ್ಯ ಅಂದ್ರು.

-masthmagaa.com

Contact Us for Advertisement

Leave a Reply