ಯುಕ್ರೇನ್​ ಗಡಿ ಸಮೀಪ ರಷ್ಯಾ ಸೇನಾ ಜಮಾವಣೆ ಮತ್ತಷ್ಟು ಜಾಸ್ತಿ!

masthmagaa.com:

ಯುಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡ್ಬೋದು ಅನ್ನೋ ಅನುಮಾನ ದಿನೇ ದಿನೇ ದಟ್ಟವಾಗುತ್ತಿರೋ ಬೆನ್ನಲ್ಲೇ, ಯುಕ್ರೇನ್‌ ಗಡಿ ಬಳಿ ರಷ್ಯಾ ಅಪಾರ ಪ್ರಮಾಣದ ಸೇನೆಯನ್ನ ನಿಯೋಜಿಸುತ್ತಿರೋ ವಿಚಾರ ಮತ್ತೆ ಸ್ಯಾಟ್‌ಲೈಟ್‌ ಚಿತ್ರಗಳಲ್ಲಿ ಗೊತ್ತಾಗಿದೆ. ಉಕ್ರೇನ್‌ ಗಡಿ ಸೇರಿದಂತೆ ಕ್ರಿಮಿಯಾ, ಬೆಲಾರುಸ್‌ ಬಳಿ ಬರೀ ಸೇನಾಪಡೆ ಅಷ್ಟೇ ಅಲ್ಲದೆ ಯುದ್ಧೋಪಕರಣಗಳನ್ನ ಕೂಡ ಜಮಾಯಿಸುತ್ತಿರುವುದು ಕಂಡು ಬಂದಿದೆ. ಬೆಲಾರಸ್‌ನ ಒಸಿಪೊವಿಚಿ ತರಬೇತಿ ಪ್ರದೇಶದಲ್ಲಿ ಶಾರ್ಟ್‌ ರೇಂಜ್‌ ಬಲಾಸ್ಟಿಕ್‌ ಮಿಸೈಲ್‌ ಇಸ್ಕಾಂಡರ್‌ನ್ನ ನಿಯೋಜಿಸಿರುವುದು ಕಾಣ್ತಿದೆ. ಹಾಗೆ ಒಬುಜ್‌-ಲೆಸ್‌ನೊವ್‌ಸ್ಕಿ ಪ್ರದೇಶದಲ್ಲೂ ಸೇನಾಪಡೆ ನಿಯೋಜಿಸಿ, ಟೆಂಟ್‌ಗಳನ್ನ ನಿರ್ಮಿಸಿದೆ. ಇನ್ನು ಕ್ರಿಮಿಯಾದ ನೊವೂಜೆರ್ನೊಯಿ ಭಾಗದಲ್ಲಂತೂ ರಷ್ಯಾ ತನ್ನ ಸೇನೆಗೆ ಹೊಸ ವಸತಿ ಪ್ರದೇಶವನ್ನೆ ಸೃಷ್ಟಿಸಿದೆ. ಜೊತೆಗೆ ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದೆ. ಇನ್ನು ಬೆಲಾರುಸ್‌ ಮತ್ತು ಯುಕ್ರೇನ್‌ ಜೊತೆಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ರಷ್ಯಾದ ತರಬೇತಿ ಮೈದಾನಗಳಲ್ಲಿ ಆರ್ಟಿಲರಿಗಳು ಯುದ್ಧಾಭ್ಯಾಸ ಮಾಡುತ್ತಿರುವುದು, ಶಸ್ತ್ರಸಜ್ಜಿತ ಸೈನಿಕರನ್ನ ಟ್ರಕ್‌ಗಳು ಸಾಗಿಸುತ್ತಿರುವುದು, ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವ ಸ್ಟೊರೇಜ್‌ಗಳನ್ನ ಸ್ಯಾಟ್‌ಲೈಟ್‌ ಚಿತ್ರಗಳಲ್ಲಿ ಕಾಣಬಹುದು.

-masthmagaa.com

Contact Us for Advertisement

Leave a Reply