ಮೆಹುಲ್ ಚೋಕ್ಸಿ ವಿವಾದಿತ ಗರ್ಲ್​​ಫ್ರೆಂಡ್​​​​​ ಹೇಳಿದ್ದೇನು..?

masthmagaa.com:

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಭಾರತಕ್ಕೆ ಬೇಕಿರೋ ಮೆಹುಲ್ ಚೋಕ್ಸಿಯ ವಿವಾದಿತ ಗರ್ಲ್​​ಫ್ರೆಂಡ್ ಬಾರ್ಬರಾ ಜಬರಿಕಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮೆಹುಲ್ ಚೋಕ್ಸಿ ಅಪಹರಣವಾಗಿಲ್ಲ. ಅವರು ಡೊಮಿನಿಕಾಗೆ ಹೋಗಿ ಅಲ್ಲಿಂದ ಕ್ಯೂಬಾಗೆ ಎಸ್ಕೇಪ್ ಆಗೋ ಪ್ಲಾನ್ ಹಾಕ್ಕೊಂಡಿದ್ರು. ನೆಕ್ಟ್​​​ ಟೈಂ ಕ್ಯೂಬಾದಲ್ಲೇ ಮೀಟ್ ಆಗಣ ಅಂತಲೂ ನನ್ನತ್ರ ಹೇಳಿದ್ರು ಅಂತ ಮಾಹಿತಿ ನೀಡಿದ್ದಾರೆ. ಜೊತೆಗೆ ನಾನು ಮೆಹುಲ್ ಚೋಕ್ಸಿಯ ಗರ್ಲ್​ಫ್ರೆಂಡ್ ಅಲ್ಲ. ಮೆಹುಲ್ ಚೋಕ್ಸಿ ನನ್ನ ಶುಗರ್ ಡ್ಯಾಡಿಯೂ ಅಲ್ಲ. ನನಗೆ ನನ್ನದೇ ಆದ ಬ್ಯುಸಿನೆಸ್ ಇದೆ. ಇನ್​ಕಮ್ ಇದೆ. ಚೋಕ್ಸಿಯ ದುಡ್ಡು, ಹೋಟೆಲ್ ಬುಕ್ಕಿಂಗ್, ಡೂಪ್ಲಿಕೇಟ್ ಆಭರಣ ಯಾವುದೂ ನಂಗೆ ಬೇಕಾಗಿಲ್ಲ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಮೆಹುಲ್ ಚೋಕ್ಸಿ ತನ್ನ ಹೆಸರು ರಾಜ ಅಂತ ಹೇಳ್ಕೊಂಡಿದ್ರು. ತಮ್ಮ ಜ್ಯುವೆಲ್ಲರಿ ಬ್ಯುಸಿನೆಸ್​​ನಲ್ಲಿ ನನ್ನನ್ನೂ ಪಾರ್ಟನರ್​​ ಆಗಿ ಮಾಡ್ಕೊಳ್ಳೋ ಪ್ಲಾನ್ ಹಾಕ್ಕೊಂಡಿದ್ರು. ಯಾವಾಗಲೂ ಫ್ಲರ್ಟ್​ ಮಾಡ್ತಿದ್ದ ಅವರು, ನಕಲಿ ಉಂಗುರ, ನೆಕ್ಲೇಸ್ ಕೂಡ ತಂದುಕೊಟ್ಟಿದ್ರು. ಕಚೇರಿಯಲ್ಲಿ ಒಂದು ಸಲ ಕಿಸ್ ಮಾಡೋಕೂ ಟ್ರೈ ಮಾಡಿದ್ರು ಅಂತ ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗೆ ಆಂಟಿಗುವಾದಲ್ಲಿ ನಾಪತ್ತೆಯಾಗಿ ಡೊಮಿನಿಕಾದಲ್ಲಿ ಪತ್ತೆಯಾಗಿದ್ದ ಚೋಕ್ಸಿ, ಬಾರ್ಬರಾ ಬರೋಕೆ ಹೇಳಿದ್ಲು. ನಾನು ಹೋಗಿದ್ದೆ. ಆಗ ಎಂಟತ್ತು ಜನ ಬಂದು ಹಿಗ್ಗಾಮುಗ್ಗಾ ಹೊಡೆದು ಅಪಹರಿಸಿದ್ರು ಅಂತ ದೂರು ನೀಡಿದ್ರು. ಇದಕ್ಕೂ ಮುನ್ನ ಚೋಕ್ಸಿ ಆಂಟಿಗುವಾದಿಂದ ತನ್ನ ಗರ್ಲ್​ಫ್ರೆಂಡ್ ಬಾರ್ಬರಾ ಜೊತೆ ಡೊಮಿನಿಕಾಗೆ ಜಾಲಿ ಟ್ರಿಪ್​​ಗೆ ಹೋಗಿದ್ದು ಅಂತಲೂ ಹೇಳಲಾಗಿತ್ತು

-masthmagaa.com

Contact Us for Advertisement

Leave a Reply