ಅಮೇರಿಕದಲ್ಲಿ ಪತ್ತೆ ಆಯ್ತು ಮತ್ತೊಂದು ವೈರಸ್!

masthmagaa.com:

ಕೊರೋನಾ ಬಳಿಕ ಈಗ ಅಮೆರಿಕದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ .ಅದೇ ಹ್ಯಾಂಟಾ ವೈರಸ್​.. ಮಿಶಿಗನ್​​ ಮೂಲದ ಮಹಿಳೆಯೊಬ್ಬರಲ್ಲಿ ಈ ವೈರಸ್ ಪತ್ತೆಯಾಗಿದ್ದು, ತುಂಬಾ ಸೀರಿಯಸ್ ಆಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ವೈರಸ್ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಿದೆ ಅಂತ ವೈದ್ಯರು ಹೇಳಿದ್ದಾರೆ. ಅಂದಹಾಗೆ ಈ ಮಹಿಳೆ ಮನೆ ಕ್ಲೀನ್ ಮಾಡ್ತಿರುವಾಗ ಇಲಿಗಳ ಸಂಪರ್ಕಕ್ಕೆ ಬಂದಿದ್ರು. ಈ ವೇಳೆ ಹ್ಯಾಂಟಾ ವೈರಸ್ ಅವರಿಗೆ ತಗುಲಿರಬಹುದು ಅಂತ ಅಂದಾಜು ಮಾಡಲಾಗಿದೆ. ಅಮೆರಿಕದಲ್ಲಿ 1993ರಿಂದಲೂ ಈ ವೈರಸ್ ಬಗ್ಗೆ ಸಂಶೋಧನೆ ನಡೀತಾ ಇದೆ. 2017ರಲ್ಲಿ ಅಮೆರಿಕದಲ್ಲಿ 728 ಮಂದಿಗೆ ಈ ವೈರಸ್ ತಗುಲಿತ್ತು. ಸಮಾಧಾನದ ವಿಷ್ಯ ಏನಂದ್ರೆ ಇದು ಅಷ್ಟೊಂದು ಅಪಾಯಕಾರಿ ವೈರಸ್ ಅಲ್ಲ. ಮನುಷ್ಯರಿಂದ ಮನುಷ್ಯರಿಗೆ ಹರಡೋದೂ ಇಲ್ಲ. ಇಲಿ, ಅಳಿಲುಗಳ ಸಂಪರ್ಕಕ್ಕೆ ಬಂದ್ರೆ ಮಾತ್ರವೇ ಹ್ಯಾಂಟಾ ವೈರಸ್ ಹರಡುತ್ತೆ. ಒಂದ್ಸಲ ವೈರಾಣು ಹರಡಿದ ಬಳಿಕ ಇದ್ರಿಂದ ಸಾವು ಸಂಭವಿಸೋ ಸಾಧ್ಯತೆ ಕೂಡ ಇರುತ್ತೆ. ಅಮೆರಿಕದ ಸಿಡಿಸಿ ಅಂದ್ರೆ ಸೆಂಟರ್ ಫಾರ್ ಡಿಸೀಸ್​ ಕಂಟ್ರೋಲ್ & ಪ್ರಿವೆನ್ಶನ್ ಪ್ರಕಾರ, ಈ ವೈರಾಣು ಅಂಟಿಕೊಂಡವರಿಗೆ 101 ಡಿಗ್ರಿಗೂ ಅಧಿಕ ಜ್ವರ ಬರುತ್ತೆ. ಮಾಂಸಖಂಡಗಳಲ್ಲಿ ಭಯಂಕರ ನೋವು ಕಾಣಿಸಿಕೊಳ್ಳುತ್ತೆ. ತಲೆನೋವಿನ ಜೊತೆಗೆ ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವು ಮತ್ತು ಚರ್ಮದ ಮೇಲೆ ಕೆಂಪುಗುಳ್ಳೆಗಳು ಕೂಡ ಕಾಣಿಸಿಕೊಳ್ಳುತ್ತೆ.

-masthmagaa.com

Contact Us for Advertisement

Leave a Reply