ಬ್ಯಾಂಕಾಕ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್‌ !

masthmagaa.com:

ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿ ಬ್ಯಾಂಕಾಕ್‌ಗೆ ಪ್ರಯಾಣ ಬೆಳಿಸಿದ್ದಾರೆ. ಮಿಲನಾ ನಾಗರಾಜ್‌ ಹುಟ್ಟುಹಬ್ಬದ ವಿಶೇಷವಾಗಿ ಪತಿ ಹಾಗೂ ಲವ್‌ ಮಾಕ್ಟೇಲ್‌ ಚಿತ್ರತಂಡದೊಂದಿಗೆ ಬ್ಯಾಂಕಾಕ್‌ನ ಅಮರಿ ವಾಟರ್‌ ಗೇಟ್‌ಗೆ ಹೋಗಿದ್ದಾರೆ.

ಹಾಸನ ಮೂಲದವರಾದ ನಟಿ ಮಿಲನಾ ನಾಗರಾಜ್, 1989ರ ಏಪ್ರಿಲ್ 25 ರಂದು ಜನಿಸಿದ್ರು. 34ನೇ ವಸಂತಕ್ಕೆ ಮಿಲನಾ ನಾಗರಾಜ್‌ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮವನ್ನು ಲವ್‌ಮಾಕ್ಟೇಲ್‌ ಸಿನಿಮಾತಂಡದೊಂದಿಗೆ ಆಚರಿಸಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್, ರೆಚೆಲ್ ಡೇವಿಡ್‌ , ಸುಷ್ಮಿತಾ ಗೌಡ ಹಾಗೂ ಡಾರ್ಲಿಂಗ್‌ ಕೃಷ್ಣ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಮಿಲನಾ ನಾಗರಾಜ್‌ ಹುಟ್ಟುಹಬ್ಬದ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿ ಹಾರೈಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಮಿಲನಾ ನಾಗರಾಜ್‌ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕೂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಮಿಲನಾ ನಾಗರಾಜ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಥೈಲಾಂಡ್‌ಗೆ ಹೋಗಿ ಅಲ್ಲಿ ಪ್ಯಾರಾಸೇಲಿಂಗ್‌ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತುಂಬಾ ದಿನಗಳಿಂದ ಪ್ಯಾರಾಸೇಲಿಂಗ್‌ ಮಾಡಬೇಕೆಂದು ಮಿಲನಾ ನಾಗರಾಜ್‌ ಅಂದುಕೊಂಡಿದ್ದರಂತೆ. ಇನ್ನು ಪ್ಯಾರಾಸೇಲಿಂಗ್‌ ಮಾಡಿರುವ ವೀಡಿಯೋವನ್ನು ಮಿಲನಾ ನಾಗರಾಜ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʻʻತುಂಬಾ ದಿನಗಳಿಂದ ಪ್ಯಾರಾಸೇಲಿಂಗ್‌ ಮಾಡಬೇಕೆಂದುಕೊಂಡಿದ್ದೆ, ಆಯ್‌ ಲವ್ಡ್‌ ಇಟ್‌. ಬರ್ತ್‌ ಡೇ ಡನ್‌ ರೈಟ್‌ʼ ಎಂದು ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply