ಕಲ್ಲಿದ್ದಲು, ಪೆಟ್ರೋಲು, ಗ್ಯಾಸ್ ಆಯ್ತು ಈಗ ಹಾಲಿನ ಪುಡಿ ಬೆಲೆ ಏರಿಕೆ

masthmagaa.com:

ಕಲ್ಲಿದ್ದಲು, ಪೆಟ್ರೋಲು, ಗ್ಯಾಸ್ ಬೆಲೆ ಏರಿಕೆ ನಂತರ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಲಿನ ಪುಡಿದೂ ಬೆಲೆ ಏರಿಕೆ ಆಗ್ತಿದೆ. ಕಳೆದ 6 ವರ್ಷಗಳ ದಾಖಲೆಯ ಮಟ್ಟ ತಲುಪಿದೆ. ಇದ್ದಕ್ಕಿದ್ದ ಹಾಗೇ ಹಾಲಿನ ಪುಡಿ, ಬೆಣ್ಣೆ ಹಾಗೂ ಚೀಸ್ ಬೇಡಿಕೆ ಜಾಸ್ತಿ ಆಗಿದೆ ಅಂತ ಅಮೆರಿಕದ ಪ್ರಮುಖ ಡೈರಿ ಎಕ್ಸ್ಪೋರ್ಟರ್ ಗಳು ಹೇಳಿದ್ದಾರೆ. ಯೂರೋಪ್ ಮತ್ತು ದೊಡ್ಡ ಡೈರಿ ರಫ್ತುದಾರ ದೇಶಗಳಲ್ಲೊಂದಾದ ನ್ಯೂಜಿಲೆಂಡ್ ಗಳಲ್ಲಿ ಹಾಲಿನ ಉತ್ಪಾದನೆ ಕಮ್ಮಿ ಆಗಿರೋ ಪರಿಣಾಮ ಈ ಹೆಚ್ಚಿನ ಬೇಡಿಕೆ ಬಂದಿದೆ. ಆದ್ರೆ ಭಾರತ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ಆಗಿರೀದ್ರಿಂದ ಸದ್ಯಕ್ಕೇನು ಹಾಲಿನ ಟ್ರಬಲ್ ಕಾಣ್ತಿಲ್ಲ.

-masthmagaa.com

Contact Us for Advertisement

Leave a Reply