15 ವರ್ಷದ ಬಾಲಕ ಮಾಡಿದ್ದು ಕೇಳಿದ್ರೆ ಶಾಕ್‌ ಆಗ್ತೀರ

masthmagaa.com:

ಮಧ್ಯಪ್ರದೇಶದ ಸಿಂಗ್ರೌಲಿ ಎಂಬಲ್ಲಿ ಫೋನ್​ ಮತ್ತು ಕಂಪ್ಯೂಟರ್​ಗಳನ್ನ ಹ್ಯಾಕ್ ಮಾಡಿ ಬಳಿಕ ಬ್ಲ್ಯಾಕ್​ ಮಾಡ್ತಿದ್ದ 15 ವರ್ಷದ ಬಾಲಕನನ್ನ ಅರೆಸ್ಟ್ ಮಾಡಲಾಗಿದೆ. ಕೇವಲ 15 ವರ್ಷದ ಈ ಬಾಲಕ ಮಾಡಿದ ಕೆಲಸ ಮಾತ್ರ ಶಾಕ್​ ಆಗುವಂಥದ್ದು. ಈತ ವಿಪಿಎನ್​ ನಂಬರ್ ಬಳಸಿಕೊಂಡು ಲೊಕೇಷನ್​ ಅನ್ನ ಯುಎಇ ಅಂತ ಚೇಂಜ್ ಮಾಡ್ಕೊತ್ತಿದ್ದ. ಬಳಿಕ ಭಾರತದಲ್ಲಿ ಬ್ಯಾನ್ ಆಗಿರೋ ಆ್ಯಪ್​ಗಳನ್ನ ಡೌನ್​ಲೋಡ್ ಮಾಡಿ ಡಿವೈಸ್​ಗಳನ್ನ ಹ್ಯಾಕ್​ ಮಾಡ್ತಿದ್ದ. ಬಳಿಕ ಮಾಹಿತಿ ಕದ್ದು ಪೇಟಿಎಂನಲ್ಲಿ ಹಣ ಕಳಿಸುವಂತೆ ಜನರಿಗೆ ಬ್ಲಾಕ್​ಮೇಲ್ ಮಾಡ್ತಿದ್ದ ಅಂತ ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ಸುಮಾರು 12 ಜನರಿಗೆ ಬ್ಲಾಕ್​ಮೇಲ್ ಮಾಡಿರೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply