ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ..! ಬೀಳುತ್ತಾ ಕೈ ಸರ್ಕಾರ..?

ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್​​​ನ 8 ಮಂದಿ ಶಾಸಕರು ಗುರುಗ್ರಾಮದ ಲಕ್ಸುರಿ ಹೋಟೆಲೊಂದಕ್ಕೆ ಶಿಫ್ಟ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​​, ಬಿಜೆಪಿ ನಾಯಕರು ನಮ್ಮ ಶಾಸಕರನ್ನು ಸೆಳೆದು ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ, ಹಣಕಾಸು ಸಚಿವ ತರುಣ್ ಭನೋತ್ ಮಾತನಾಡಿ, 8 ಮಂದಿ ಶಾಸಕರನ್ನು ಬಿಜೆಪಿ ಗುರುಗ್ರಾಮದ ಹೋಟೆಲ್​​ನಲ್ಲಿ ಬಲವಂತವಾಗಿ ಇರಿಸಿಕೊಂಡಿದೆ ಅಂತ ಕಿಡಿಕಾರಿದ್ದಾರೆ.

ಇವರೆಲ್ಲರೂ ಕಾಂಗ್ರೆಸ್ ಶಾಸಕರಲ್ಲ. ಇವರಲ್ಲಿ ನಾಲ್ವರು ಕಾಂಗ್ರೆಸ್,ಇಬ್ಬರು ಬಿಎಸ್​ಪಿ, ಓರ್ವ ಎಸ್​​ಪಿ ಮತ್ತೋರ್ವ ಪಕ್ಷೇತರ ಶಾಸಕ ಕೂಡ ಸೇರಿದ್ದಾರೆ. ಇವರೆಲ್ಲರನ್ನು ಹರಿಯಾಣ ಪೊಲೀಸರ ಸಹಾಯದೊಂದಿಗೆ ಬಿಜೆಪಿ ಗುರುಗ್ರಾಮದ ಹೋಟೆಲ್​​ನಲ್ಲಿ ಇರಿಸಿಕೊಂಡಿದೆ ಅಂತ ತರುಣ್ ಭನೋತ್ ಆರೋಪಿಸಿದ್ದಾರೆ.

ಅಂದಹಾಗೆ ಮಧ್ಯಪ್ರದೇಶದಲ್ಲಿ ಒಟ್ಟು 231 ವಿಧಾನಸಭೆ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ 116 ಸ್ಥಾನಗಳ ಅಗತ್ಯವಿದೆ. ಸದ್ಯ  ಬಿಜೆಪಿ ಬಳಿ 107 ಸ್ಥಾನಗಳಿದ್ದರೆ, ಸರ್ಕಾರದ ಬಳಿ 121 ಸ್ಥಾನಗಳಿವೆ.

Contact Us for Advertisement

Leave a Reply