ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆಗೆ ಬೆಂಕಿ!

masthmagaa.com;

ಪಾಕಿಸ್ತಾನದಲ್ಲಿ ಸಾವಿರಾರು ಜನರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಚ್ಚಿದ್ದಾರೆ. ಖುರಾನ್​​​ಗೆ ಬೆಂಕಿ ಹಚ್ಚಿದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಚಾರ್ಸಡ್ಡಾ ನಗರದಲ್ಲಿ ಸುಮಾರು 5 ಸಾವಿರ ಜನ ಪೊಲೀಸ್ ಠಾಣೆಗೆ ಸುತ್ತುವರಿದಿದ್ದಾರೆ. ಪೊಲೀಸ್ ಸ್ಟೇಷನ್​​ ಮತ್ತು ಅಲ್ಲಿ ನಿಲ್ಲಿಸಿದ್ದ 30 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈಗಲೂ ಸುಮಾರು 2 ಸಾವಿರದಷ್ಟು ಜನ ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ್ದು, ಅಧಿಕಾರಿಗಳ ಯುನಿಫಾರ್ಮ್​ ಸುಟ್ಟುಹಾಕಿದ್ದಾರೆ. ಆರೋಪಿಯನ್ನು ಪೊಲೀಸರು ನಮ್ಮ ಕೈಗೆ ಒಪ್ಪಿಸಬೇಕು. ಖುರಾನ್​​ನ್ನು ಸುಟ್ಟು ಹಾಕಿದಂತೆ ಆರೋಪಿಯನ್ನು ಕೂಡ ನಾವು ಸುಟ್ಟು ಹಾಕ್ತೀವಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಬಂಧಿತ ವ್ಯಕ್ತಿಯ ಧರ್ಮವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಜೊತೆಗೆ ಯಾವ ಕಾರಣಕ್ಕಾಗಿ ಖುರಾನ್​ನ್ನು ಸುಟ್ಟು ಹಾಕಿದ್ದಾನೆ ಅನ್ನೋದು ಕೂಡ ಸ್ಪಷ್ಟವಾಗಿಲ್ಲ. ತನಿಖೆ ನಡೆಸ್ತಿದ್ದೀವಿ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply