ಮುಂದಿನ ವಾರ ಬಾಂಗ್ಲಾದೇಶಕ್ಕೆ ಮೋದಿ ವಿಶೇಷ ಭೇಟಿ

masthmagaa.com:

ಮುಂದಿನ ವಾರ ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಢಾಕಾ ಹೊರತುಪಡಿಸಿ ಇತರೆ 3 ಸ್ಥಳಗಳಿಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಜೊತೆಗೆ ಮಾತುಕತೆ ನಡೆಸಲಿದ್ದು, ಈ ವೇಳೆ ಉಭಯ ನಾಯಕರು 3 (ಎಂಒಯು) ಮೆಮೋರಂಡಮ್ ಆಫ್ ಅಂಡರ್​​ಸ್ಟಾಂಡಿಂಗ್​​​​ಗೆ ಸಹಿ ಹಾಕಲಿದ್ದಾರೆ.

ಆದ್ರೆ ಅವುಗಳು ಯಾವುದು ಅಂತ ಇನ್ನೂ ಕೂಡ ಮಾಹಿತಿ ಲಭ್ಯವಾಗಿಲ್ಲ. ಮೋದಿ ಮಾತ್ರ ಅಲ್ಲ.. ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್​ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ ನಿನ್ನೆಯೇ ಈ ಕಾರ್ಯಕ್ರಮಗಳು ಶುರುವಾಗಿದ್ದು ಮುಂದಿನ 10 ದಿನಗಳ ಕಾಲ ನಡೆಯಲಿದೆ. ಈ ವೇಳೆ ಬೇರೆ ಬೇರೆ ದಿನ ಈ ದೇಶಗಳ ನಾಯಕರು ಬಾಂಗ್ಲಾಗೆ ಭೇಟಿ ನೀಡಲಿದ್ದಾರೆ. 10 ದಿನಗಳ ಅವಧಿಯಲ್ಲಿ ಇಷ್ಟು ದೇಶಗಳ ನಾಯಕರು ಬಾಂಗ್ಲಾದೇಶಕ್ಕೆ ಭೇಟಿ ನೀಡ್ತಿರೋದು ಇದೇ ಮೊದಲಾಗಿದೆ.

-masthmagaa.com

Contact Us for Advertisement

Leave a Reply