ಮಗಳ ಹೆಸರಲ್ಲಿ ಕಾಲೇಜು ಸೇರಿ, ಯುವಕರೊಂದಿಗೆ ಡೇಟಿಂಗ್ ಮಾಡಿದ ಮಹಿಳೆ!

masthmagaa.com:
ಅಮೆರಿಕದ ಮಿಸ್ಸೌರಿಯಲ್ಲಿ ತಾಯಿಯೊಬ್ಬಳು ತನ್ನ ಮಗಳ ಐಡೆಂಟಿಟಿಯನ್ನು ಕದ್ದು, ಕಾಲೇಜಿಗೆ ಸೇರಿ ಈಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಲೌರಾ ಒಗ್ಲೆಸ್ಬಿ ಅನ್ನೋರು ತನ್ನ ಮಗಳು ಲೌರೆನ್ ಹಾಯ್ಸ್​ರ ಐಡೆಂಟಿಟಿ ಬಳಸಿಕೊಂಡು ಬಾಪ್ಟಿಸ್ಟ್​ ಯುನಿವರ್ಸಿಟಿಗೆ ಸೇರಿದ್ದಾರೆ. ಮಗಳ ಹೆಸರಲ್ಲಿ ಡ್ರೈವಿಂಗ್ ಲೈಸೆನ್ಸ್ ಕೂಡ ಪಡ್ಕೊಂಡಿದ್ದಾರೆ. ನಂತರ ಪ್ಲಾನ್ ಮಾಡ್ಕೊಂಡು ಅಮೆರಿಕ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಎಜುಕೇಶನ್ ಲೋನ್ ಪಡ್ಕೊಂಡಿದ್ದಾರೆ. 25 ಸಾವಿರ ಡಾಲರ್​​ನಷ್ಟು ದುಡ್ಡನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಂತರ ತನ್ನ ಮಗಳು ಲೌರೆನ್ ಹಾಯ್ಸ್ ಹೆಸರಲ್ಲಿ ಸ್ನಾಪ್​ಚಾಟ್ ಅಕೌಂಟ್ ಓಪನ್ ಮಾಡಿ, ಹುಡುಗರಿಗೆ ಬಲೆ ಬೀಸೋಕೆ ಶುರು ಮಾಡಿದ್ದಾರೆ. ನನಗೆ ಇನ್ನೂ 22 ವರ್ಷ ಅಂತ ಹೇಳ್ಕೊಂಡು 20 ವರ್ಷದ ಹುಡುಗರ ಜೊತೆಗೆ ಡೇಟಿಂಗ್ ಮಾಡಿದ್ದಾರೆ. 20ರ ಹರೆಯದ ಯುವತಿಯರು ಹೇಗೆಲ್ಲಾ ಲೈಫ್ ಸ್ಟೈಲ್ ಲೀಡ್ ಮಾಡ್ತಾರೋ ಅದೇ ರೀತಿ ಇವರು ಕೂಡ ಬದುಕೋಕೆ ಶುರು ಮಾಡಿದ್ರು. ಡ್ರೆಸ್ ಧರಿಸೋದು, ಮೇಕಪ್​​ ಹೀಗೆ ಪ್ರತಿಯೊಂದು ಯುವತಿಯರ ರೀತಿಯೇ ಇತ್ತು. ಆದ್ರೆ 2018ರಲ್ಲಿ ಈಕೆಯ ನಿಜ ಬಣ್ಣ ಬಯಲಾಗಿದೆ. ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ತನಿಖೆ ನಡೆಸಲಾಯ್ತು. ಮೊದಲಿಗೆ ಇಲ್ಲ ನಾನ್ ಹಾಗೇ ಮಾಡೇ ಇಲ್ಲ ಎಂದ ಲೌರಾ ಒಗ್ಲೆಸ್ಬಿ, ನಂತರ ಸತ್ಯ ಒಪ್ಪಿಕೊಂಡಿದ್ದಾರೆ. ಸದ್ಯ ಆಕೆಗೆ 5 ವರ್ಷ ಜೈಲು ಶಿಕ್ಷೆ ಮತ್ತು 17,521 ಡಾಲರ್ ದಂಡವನ್ನು ವಿಧಿಸಲಾಗಿದೆ.
-masthmagaa.com

Contact Us for Advertisement

Leave a Reply