ಹಾವು-ಮುಂಗುಸಿ ಫೈಟ್..ಗೆದ್ದಿದ್ಯಾರು..?- ವಿಡಿಯೋ ನೋಡಿ

masthmagaa.com:

ಹಾವು-ಮುಂಗುಸಿ ಸಂಬಂಧ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೆ ಇದೆ. ಎರಡು ಎಣ್ಣೆ- ಸೀಗೆಕಾಯಿ ಇದ್ದಹಾಗೆ. ಒಂದಕ್ಕೊಂದು ಆಗಿಬರೋಲ್ಲ. ಹಾವು ಕಂಡರೆ ಸಾಕು, ಮುಂಗುಸಿ ತಕ್ಷಣವೇ ಅಟ್ಯಾಕ್ ಮಾಡುತ್ತೆ. ಆದ್ರೆ ಈ ಹಾವು-ಮುಂಗುಸಿ ಫೈಟ್‌ನ್ನು ಬಹುತೇಕ ಮಂದಿ ಸಿನಿಮಾದಲ್ಲೇ ನೋಡಿರೋದು. ಇವರೆಡರ ರಿಯಲ್ ಫೈಟ್‌ನ್ನು ಅರಣ್ಯ ಇಲಾಖೆ ಅಧಿಕಾರಿ ಸುಸಾಂತ್ ನಂದ ತಮ್ಮ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೆ ಹಾವು ಮುಂಗುಸಿಯನ್ನ ಕಚ್ಚಿದರು ಯಾಕೆ ಅಪಾಯ ಆಗೋದಿಲ್ಲ ಅನ್ನೋದನ್ನು ಬರೆದುಕೊಂಡಿದ್ದಾರೆ. ಮುಂಗುಸಿ ಹಾವಿನೊಂದಿಗೆ ಸೆಣಸಾಡಿ, ಅದರ ವಿಷವನ್ನು ಅರಗಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡಿದೆ. ಹೀಗಾಗಿ ಅದಕ್ಕೆ ಅಪಾಯವಿಲ್ಲ ಎಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply