ಹವಾಮಾನ ವರದಿ: ನಾಳೆ ನಾಡಿದ್ದು ಭಾರೀ ಮಳೆ!

masthmagaa.com:

ನೈಋತ್ಯ ಮುಂಗಾರು ಇಡೀ ಕೇರಳವನ್ನ ಆವರಿಸಿದ್ದು ಈಗ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಹರಡುತ್ತಿದೆ. ಉತ್ತರ ಒಳನಾಡು ಹಾಗೂ ಆಂಧ್ರದ ಕೆಲಭಾಗ ಹಾಗೂ ಕೆಲ ಕಡೆ ತಮಿಳುನಾಡಿನಲ್ಲೂ ಮುಂಗಾರಿನ ದರ್ಶನ ಶುರುವಾಗಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದೇ ವೇಳೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹೆಚ್ಚಿನ ಕಡೆ ಇಂದು ನಾಳೆ ಜೊರು ಮಳೆಯಾಗುತ್ತೆ ಅಂತ ಕೂಡ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ಕರ್ನಾಟಕ ಕರವಾಳಿಯ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ 6ನೇ ತಾಋಈಕಿನ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹಾಗೇ ದಿಲ್ಲಿಯಲ್ಲಿ ವಿಪರೀತ ಗಾಳಿ ಮಳೆಯಾಗಿದ್ದು ಹಲವು ಕಡೆ ಮರಗಳು ಬಿದ್ದೋಗಿವೆ. ಪ್ರತಿಕೂಲ ಹವಾಮಾನದ ಕಾರಣ ಹಲವು ವಿಮಾನಗಳನ್ನ ಡೈವರ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply