ಟ್ರಂಪ್, ಬೈಡೆನ್​​​ ಸೀಕ್ರೆಟ್ ಸರ್ವಿಸ್ ಗಾರ್ಡ್​​​ಗಳಿಗೆ ಕೊರೋನಾ..!

masthmagaa.com:

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಹೊಸದಾಗಿ ಆಯ್ಕೆಯಾಗಿರೋ ಜೋ ಬೈಡೆನ್ ಮತ್ತು ವೈಟ್​ ಹೌಸ್​​ಗೆ ರಕ್ಷಣೆ ನೀಡುವ ಸೀಕ್ರೆಟ್ ಸರ್ವಿಸ್ ಏಜೆಂಟ್​ಗಳಿಗೆ ಕೊರೋನಾ ಕಂಟಕ ಎದುರಾಗಿದೆ. ಇವರಲ್ಲಿ ಹಲವರಿಗೆ ಕೊರೋನಾ ಬಂದಿದ್ರೆ, ಇನ್ನುಳಿದವರನ್ನು ಸೋಂಕಿತರ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್​​ನಲ್ಲಿ ಇರಿಸಲಾಗಿದೆ ಅಂತ ವಾಷಿಂಗ್ಟನ್ ಪೋಸ್ಟ್​ ವರದಿ ಮಾಡಿದೆ.

ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಈ ಏಜೆಂಟ್​​ಗಳು ಟ್ರಂಪ್ ಜೊತೆಯಲ್ಲಿ ಹಲವು ರ್ಯಾಲಿಗಳಲ್ಲಿ ಭಾಗಿಯಾಗಿದ್ರು. ಈ ವೇಳೆ ಹಲವರು ಮಾಸ್ಕ್​ಗಳನ್ನು ಕೂಡ ಧರಿಸಿರಲಿಲ್ಲ. ಅಲ್ಲದೆ ನವೆಂಬರ್ 3ರಂದು ಡೊನಾಲ್ಡ್​ ಟ್ರಂಪ್ ಎಲೆಕ್ಷನ್ ನೈಟ್ ಪಾರ್ಟಿಯನ್ನು ಆಯೋಜಿಸಿದ್ರು. ಇದ್ರಲ್ಲಿ ಭಾಗಿಯಾಗಿದ್ದವರು ಕೂಡ ಯಾರೂ ಮಾಸ್ಕ್​ ಧರಿಸಿರಲಿಲ್ಲ. ಇದೇ ಕಾರಣಕ್ಕೆ ಸೋಂಕು ಈ ಪ್ರಮಾಣದಲ್ಲಿ ಹರಡಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply