ಧೋನಿ IPLನಲ್ಲಿ ಮಾತ್ರ ಆಡಿದ್ರೆ, ಬ್ಯಾಟಿಂಗ್ ತುಂಬಾ ಕಷ್ಟ..!

masthmagaa.com:

ಧೋನಿ ಐಪಿಎಲ್​ನಲ್ಲಿ ಮಾತ್ರವೇ ಆಟ ಮುಂದುವರಿಸಿದ್ರೆ, ಪ್ರತಿ ವರ್ಷವೂ ಐಪಿಎಲ್​​ನಲ್ಲಿ ಬ್ಯಾಟಿಂಗ್ ಮಾಡಲು ಧೋನಿಗೆ ಕಷ್ಟವಾಗುತ್ತೆ ಅಂತ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ವಯಸ್ಸಿನ ಬಗ್ಗೆ ಮಾತನಾಡುವುದು ಸರಿಯಲ್ಲ.. ಆದ್ರೂ ಕೂಡ ಧೋನಿಯವರ ವಯಸ್ಸಿನಲ್ಲಿ ಆಡಿದಷ್ಟೂ ಒಳ್ಳೆಯದು.. ಅವರು ಆಡಿದಷ್ಟೂ ದೇಹ ಹದವಾಗುತ್ತೆ.. ಆದ್ರೆ ವರ್ಷದಲ್ಲಿ 10 ತಿಂಗಳು ಸುಮ್ಮನೆ ಇದ್ದು, ಆಮೇಲೆ ಐಪಿಎಲ್ ಆಡ್ತೀನಿ ಅಂದ್ರೆ ಏನಾಗುತ್ತೆ ಅಂತ ನೀವೇ ನೋಡಿದ್ದೀರಿ ಅಂತ ಹೇಳಿದ್ದಾರೆ.

ಇತ್ತೀಚೆಗಷ್ಟೇ 13ನೇ ಆವೃತ್ತಿಯ ಐಪಿಎಲ್​​​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ವಿರುದ್ಧ ಕೊನೆಯ ಪಂದ್ಯವನ್ನಾಡಿತು. ಈ ವೇಳೆ ಹಳದಿ ಜೆರ್ಸಿಯಲ್ಲಿ ಇದು ಕೊನೆಯ ಪಂದ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಮಾಹಿ, ಖಂಡಿತ ಇಲ್ಲ.. ಎಂದು ಹೇಳುವ ಮೂಲಕ 2021ರಲ್ಲೂ ಆಡುವ ಇಂಗಿತ ವ್ಯಕ್ತಪಡಿಸಿದ್ರು.

-masthmagaa.com

 

Contact Us for Advertisement

Leave a Reply