ಮಾಹಿ ತೆಗೆದ ಹುಲಿಯ ಚಿತ್ರ ನೋಡಿ…ಅಭಿಮಾನಿಗಳು ಫುಲ್ ಖುಷ್

ಮಧ್ಯಪ್ರದೇಶ: ಸದ್ಯ ಕ್ರಿಕೆಟ್​​ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ಮಾಹಿ ತಮ್ಮ ಪತ್ನಿ ಸಾಕ್ಷಿ ಜೊತೆ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಇದೀಗ ಉದ್ಯಾನವನ ಭೇಟಿ ವೇಳೆ ತೆಗೆದಿದ್ದ ಹುಲಿಯ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ನೀವು ಹುಲಿಯನ್ನು ಕಂಡಾಗ ಅದರ ಫೋಟೋಗಳನ್ನು ತೆಗೆಯಲು ಸಾಕಷ್ಟು ಸಮಯ ನೀಡುತ್ತಾರೆ. ಕನ್ಹಾ ತುಂಬಾ ಅತ್ಯುತ್ತಮವಾಗಿದೆ. ನೀವೂ ಭೇಟಿ ನೀಡಿ ಅಂತ ಬರೆದುಕೊಂಡಿದ್ದಾರೆ. ಮಾಹಿಯ ಫೋಟೋಗ್ರಫಿ ಸ್ಕಿಲ್​ನ್ನು ಅಭಿಮಾನಿಗಳು ಹಾಡಿಹೊಗಳಿದ್ದಾರೆ.

s1vjb8b8

Contact Us for Advertisement

Leave a Reply