ಸೈಲೆಂಟಾಗಿ ನಿವೃತ್ತರಾಗ್ತಾರಾ ಕೂಲ್ ಕೂಲ್ ಧೋನಿ..?

masthmagaa.com:

ಮುಂಬರುವ ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಸ್ಥಾನ ಪಡೆಯೋದು ಅನುಮಾನ ಅಂತ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇದೇ ವರ್ಷದ ಅಕ್ಟೋಬರ್-ನವೆಂಬರ್​​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಧೋನಿ ತಂಡದಲ್ಲಿ ಸ್ಥಾನ ಪಡೆಯಬೇಕು ಅಂತ ನಾನು ಕೂಡ ಬಯಸುತ್ತೇನೆ. ಆದ್ರೆ ಅದು ಸಾಧ್ಯವಾಗೋದು ಅನುಮಾನ. ಆದ್ರೆ ಧೋನಿ ಕೂಡ ತಮ್ಮ ನಿವೃತ್ತಿಯ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ. ಹೀಗಾಗಿ ಧೋನಿ ಸೈಲೆಂಟ್ ಆಗಿಯೇ ನಿವೃತ್ತರಾಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.

2019ರಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ಇಂಡಿಯಾ ಸೋತು ಹೊರಬಂದ ಬಳಿಕ ಧೋನಿ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅದೂ ಅಲ್ಲದೆ ಮೌನವಾಗಿಯೇ ಇದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್​ನಲ್ಲಿ ಮತ್ತೆ ಫೀಲ್ಡ್​ಗೆ ಇಳಿಯಲಿದ್ದಾರೆ. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಧೋನಿ ಆಯ್ಕೆ ವಿಚಾರ ಅವರ ಐಪಿಎಲ್ ಪ್ರದರ್ಶನದ ಮೇಲೆ ನಿಂತಿದೆ ಎಂದಿದ್ದಾರೆ. ಆದ್ರೆ ಐಪಿಎಲ್ ಮೇಲೆ ಕೊರೋನಾ ಕರಿನೆರಳು ಆವರಿಸಿದ್ದು, ಮಾರ್ಚ್​ 29ರಂದು ಶುರುವಾಗಬೇಕಿದ್ದ ಪಂದ್ಯಾವಳಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply