ರಾಂಚಿಯಲ್ಲಿ ಪಿಚ್ ರೋಲರ್ ಓಡಿಸಿದ ಮಾಹಿ..! ವಿಡಿಯೋ ವೈರಲ್

ರಾಂಚಿ: ವಿಶ್ವಕಪ್ ಬಳಿಕ ಕ್ರಿಕೆಟ್​​ನಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಆಗಾಗ ಸುದ್ದಿಯಾಗ್ತಾ ಇರ್ತಾರೆ. ಇದೀಗ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದೆ. ಇದರಲ್ಲಿ ಧೋನಿ ರಾಂಚಿಯ ಜೆಎಸ್​​​​ಸಿಎ ಸ್ಟೇಡಿಯಂನಲ್ಲಿ ಕ್ರಿಕೆಟ್​ ಗ್ರೌಂಡ್​​​​​​​​​​​​​ನಲ್ಲಿ ರೋಲರ್ ಓಡಿಸಿದ್ದಾರೆ. ಪಿಚ್ ರೋಲರ್ ಓಡಿಸುತ್ತಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಪ್ರತಿದಿನವೂ ಈ ಸ್ಟೇಡಿಯಂಗೆ ಬರುವ ಮಾಹಿ, ಜಾರ್ಖಂಡ್​ ರಣಜಿ ಟ್ರೋಫಿ ಆಟಗಾರರಿಗೆ ಟ್ರೇನಿಂಗ್ ಕೊಡ್ತಿದ್ದಾರೆ. ಅಲ್ಲದೆ ಮಾರ್ಚ್​​ 3ರಿಂದ ಆರಂಭವಾಗಲಿರುವ ಐಪಿಎಲ್​​​​ಗೆ ತಾವು ಕೂಡ ರೆಡಿಯಾಗ್ತಿದ್ದಾರೆ. ಈ ನಡುವೆ ಪಿಚ್ ರೋಲರ್ ಓಡಿಸಿ ಸುದ್ದಿಯಾಗಿದ್ದಾರೆ.

Contact Us for Advertisement

Leave a Reply