41ನೇ ವರ್ಷಕ್ಕೆ ಕಾಲಿಟ್ಟ “ಮುಖ್ಯಮಂತ್ರಿ” ನಾಟಕ ಈಗ ಹೊಸ ರೂಪದಲ್ಲಿ

masthmagaa.com:

“ಮುಖ್ಯಮಂತ್ರಿ” ನಾಟಕದ ಮೂಲಕ ಜನಪ್ರಿಯವಾದ ನಟ ಮುಖ್ಯಮಂತ್ರಿ ಚಂದ್ರು ಅವರು 41 ವರ್ಷಗಳ ನಂತರ ” ಮತ್ತೆ ಮುಖ್ಯಮಂತ್ರಿ” ಎಂಬ ಹೊಸ ನಾಟಕದ ಮೂಲಕ ಜನರನ್ನ ರಂಜಿಸಲು ಸಜ್ಜಾಗಿದ್ದಾರೆ.

“ಕಲಾ ಗಂಗೋತ್ರಿ” ಎಂಬ 50 ವರ್ಷಗಳ ಇತಿಹಾಸ ಇರುವ ಹವ್ಯಾಸಿ ರಂಗಭೂಮಿ ತಂಡದ ಮೂಲಕ ಸುಮಾರು125 ನಾಟಕಗಳನ್ನ ಹೊರತಂದಿದೆ. ಇವುಗಳಲೆಲ್ಲ ಬಹಳ ಜನಪ್ರಿಯವಾಗಿರುವ “ಮುಖ್ಯಮಂತ್ರಿ” ನಾಟಕಕ್ಕೆ
ಈಗ ಭರ್ಜರಿ 41 ವರ್ಷಗಳನ್ನು ಪೂರೈಸಿದ ಸಂಭ್ರಮ.
ನಾಟಕದ ಮೂಲಕ ಚಂದ್ರು ಎಂಬ ಪ್ರತಿಭಾವಂತ ನಟ ಕನ್ನಡ ಚಿತ್ರರಂಗಕ್ಕೆ “ಮುಖ್ಯಮಂತ್ರಿ ಚಂದ್ರು” ಎಂಬ ಹೆಸರಿನಿಂದಲೇ ಪರಿಚಯವಾಗುತ್ತಾರೆ.

1980 ರ ಡಿಸೆಂಬರ್ 4 ರಂದು ಮೊದಲ ಬಾರಿಗೆ ಪ್ರದರ್ಶನಗೊಂಡ ಈ ನಾಟಕ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ ಎಂದರೆ ಇದಕ್ಕೆ ಮುಖ್ಯ ಕಾರಣ ಈ ನಾಟಕದ ವಸ್ತು ವಿಷಯ. ಅಂದಹಾಗೆ ಈ ನಾಟಕವನ್ನು ರಾಜ್ಯದ ಈ ವರೆಗಿನ ಮುಖ್ಯಮಂತ್ರಿಗಳ ಪೈಕಿ 14 ಮುಖ್ಯಮಂತ್ರಿಗಳು ನೋಡಿ ಶಭಾಷ್ ಎಂದಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಪೂರ್, ಹಾಂಕಾಂಗ್, ದೆಹಲಿ, ಬಾಂಬೆ, ಪುಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ” ಮುಖ್ಯಮಂತ್ರಿ” ನಾಟಕ ಪ್ರದರ್ಶನಗೊಂಡ ದಾಖಲೆ ಇದೆ.

ಈಗ 41 ವರ್ಷಗಳ ನಂತರ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು ಹೊಸ ರೂಪು ರೇಷೆಯ ಮೂಲಕ ಜನರನ್ನು ರಂಜಿಸಲು “ಮತ್ತೆ ಮುಖ್ಯಮಂತ್ರಿ” ಎಂಬ ಹೆಸರಿನಲ್ಲಿ ಏಪ್ರಿಲ್ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಕ್ಕೆ ಅಣಿಯಾಗುತ್ತಿದೆ.
2 ಗಂಟೆ ಅವಧಿಯ ಈ ನಾಟಕದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಆದವನು ಹೇಗಿರಬೇಕು, ಆತನ ಜವಾಬ್ದಾರಿಗಳೇನು, ಕರ್ತವ್ಯಗಳೇನು, ಇದೆಲ್ಲದರ ಮೇಲೆ ಬೆಳಕು ಚೆಲ್ಲುವ ಕಥಾ ವಸ್ತು ಈ ನಾಟಕದಲ್ಲಿ ಇರಲಿದ್ದು, ಕಥೆಯನ್ನ ಕೆ ವೈ ನಾರಾಯಣಸ್ವಾಮಿ ಅವರು ಬರೆದಿದ್ದಾರೆ. ಹಾಗೆ “ಮುಖ್ಯಮಂತ್ರಿ” ನಾಟಕ ನಿರ್ದೇಶನ ಮಾಡಿದ್ದ ಡಾ. ಬಿ.ವಿ. ರಾಜಾರಾಂ ಅವರೇ ಈ ನಾಟಕವನ್ನು ಸಹ ನಿರ್ದೇಶಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply