ಆಂಗ್ ಸಾನ್ ಸೂ ಕಿ ಮೇಲೆ ಗಂಭೀರ ಕೇಸ್​ ಹಾಕಿದ ಮಯನ್ಮಾರ್ ಸೇನೆ

masthmagaa.com:

ಮಯನ್ಮಾರ್​ ಸೇನೆಯಿಂದ ಅರೆಸ್ಟ್ ಆಗಿರೋ ಚುನಾಯಿತ ನಾಯಕಿ ಆಂಗ್ ಸಾನ್​ ಸೂ ಕಿ ವಿರುದ್ಧ ಈಗ ವಸಾಹತುಶಾಹಿ ಯುಗದ ಅಧಿಕೃತ ರಹಸ್ಯ ಕಾನೂನುಗಳನ್ನ ಉಲ್ಲಂಘಿಸಿದ ಆರೋಪ ಹೊರಿಸಿದೆ ಮಯನ್ಮಾರ್ ಸೇನೆ. ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ವಿರುದ್ಧದ ಅತ್ಯಂತ ಗಂಭೀರ ಆರೋಪ ಇದಾಗಿದೆ. ಅಂದ್ಹಾಗೆ ಕಳೆದ ವರ್ಷದ ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸಾನ್​ ಸೂ ಕಿ ಅವರ ಪಕ್ಷ ಗೆದ್ದಿತ್ತು. ಆದ್ರೆ ಆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತ ಫೆಬ್ರವರಿ 1ರಂದು ಕ್ಷಿಪ್ರ ಕ್ರಾಂತಿ ನಡೆಸಿದ ಮಯನ್ಮಾರ್ ಸೇನೆ ಆಂಗ್ ಸಾನ್ ಸೂ ಕಿ ಸರ್ಕಾರವನ್ನ ವಜಾ ಮಾಡಿ ಹಲವು ನಾಯಕರನ್ನ ಅರೆಸ್ಟ್ ಮಾಡಿತ್ತು.

ಅಲ್ಲಿಂದ ಇಲ್ಲಿವರೆಗೆ ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೀತಾನೆ ಇದೆ. ಈ ಸಂಘರ್ಷದಲ್ಲಿ ಇದುವರೆಗೆ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ. ದೇಶಬಿಟ್ಟು ಹೋಗಿದ್ದಾರೆ. ಇನ್ನು ಪ್ರತಿಭಟನೆಯನ್ನ ಹತ್ತಿಕ್ಕಲು ಮಯನ್ಮಾರ್​ ಸೇನೆ ಇಂಟರ್ನೆಟ್​​ ಅನ್ನ ಕೂಡ ಬಂದ್ ಮಾಡಿದೆ. ಸೇನೆ ಚಾಪೆ ಕೆಳಗೆ ನುಸುಳಿದ್ರೆ, ಪ್ರತಿಭಟನಕಾರರು ರಂಗೋಲಿ ಕೆಳಗೇನೆ ನುಸುಳಿದ್ದಾರೆ. ಏನ್​ ಮಾಡಿದ್ದಾರೆ ಅಂದ್ರೆ, ಆಫ್​ಲೈನ್​ನಲ್ಲಿ ಸಂವಹನ – ಕಮ್ಯುನಿಕೇಟ್ ಮಾಡಬಹುದಾದ ಅಪ್ಲಿಕೇಷನ್​ಗಳ ಲಿಂಕ್​​ ಮತ್ತು ರೇಡಿಯೋ ಚಾನಲ್​ಗಳ ಲಿಂಕ್​ಗಳನ್ನ ಹೆಚ್ಚೆಚ್ಚು ಶೇರ್ ಮಾಡಿದ್ದಾರೆ. ಜೊತೆಗೆ ಬೀದಿ ಬೀದಿಗಳಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಿ ನಾವು ಯಾವತ್ತೂ ಸೇನೆಗೆ ಸರಂಡರ್ ಆಗಲ್ಲ ಅಂತ ಘೋಷಣೆ ಕೂಗಿದ್ದಾರೆ.

-masthmagaa.com

Contact Us for Advertisement

Leave a Reply