ಅಮ್ಮನಿಗೆ ಸ್ಕೂಟರ್​ ಮೂಲಕವೇ ದೇಶ ಸುತ್ತಾಡಿಸಿದ ಮಗ..!

ಮೈಸೂರು: ದೊಡ್ಡವರಾಗಿ ಮದ್ವೆ ಆದ್ಕೂಡ್ಲೇ ಅಪ್ಪ, ಅಮ್ಮನ್ನು ಮನೆಯಿಂದ ಹೊರಹಾಕೋ ಜನರನ್ನು ನೋಡಿದ್ದೇವೆ. ಆದ್ರೆ ಮೈಸೂರಿನಲ್ಲೊಬ್ಬರ ಪುತ್ರ 70 ವರ್ಷದ ಅಮ್ಮನನ್ನು ತನ್ನ ಸ್ಕೂಟರ್ ಮೂಲಕ 48,100 ಕಿಲೋಮೀಟರ್ ತೀರ್ಥಯಾತ್ರೆ ಮಾಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಿಶ್ರಾ ಸೇರಿದಂತೆ ಹಲವರು ಶೇರ್ ಮಾಡ್ತಿದ್ದಾರೆ.

ಡಾ.ಕೃಷ್ಣಕುಮಾರ್ ಎಂಬ ವ್ಯಕ್ತಿ ತಮ್ಮ ಕೆಲಸವನ್ನೂ ಬಿಟ್ಟು, 20 ವರ್ಷದ ಹಳೆಯ ಸ್ಕೂಟರ್​ನಲ್ಲಿ ಇಡೀ ದೇಶವನ್ನೇ ಸುತ್ತಾಡಿಸಿದ್ದಾರೆ. ಒಮ್ಮೆ ಇವರ ತಾಯಿ ಚೂಡರತ್ನ, ನಾನು ಹಂಪಿಯನ್ನೂ ನೋಡಿಲ್ಲ ಅಂತ ಹೇಳಿದ್ರು. ಇದ್ರಿಂದ ಬೇಸರಗೊಂಡ ಮಗ ಕೃಷ್ಣಕುಮಾರ್​ ತನ್ನ ತಾಯಿಯನ್ನು ಇಡೀ ದೇಶದಲ್ಲಿ ಸುತ್ತಾಡಿಸಲು ಪ್ಲಾನ್ ಮಾಡಿದ್ರು. ಅದರಂತೆ ತಮ್ಮ ತಂದೆ ನೀಡಿದ್ದ 20 ವರ್ಷ ಹಳೆಯ ಬಜಾಜ್ ಚೇತಕ್ ಸ್ಕೂಟರ್​ನಲ್ಲಿ 2018ರ ಜನವರಿಯಲ್ಲಿ ದೇಶ ಸುತ್ತಲು ಆರಂಭಿಸಿದ್ರು. ಈ ಬೈಕ್​​ನ್ನು ಕೃಷ್ಣಕುಮಾರ್ ಅವರ ತಂದೆ ಗಿಫ್ಟ್​ ಕೊಟ್ಟಿದ್ದರು. ಹೀಗಾಗಿ ಅದರಲ್ಲೇ ಹೋದ್ರೆ ಅವರೂ ನಮ್ಮೊಂದಿಗೆ ಬಂದ ಹಾಗೆ ಅನ್ನಿಸುತ್ತೆ ಅಂತಾರೆ ಕೃಷ್ಣಕುಮಾರ್​​..

ಈ ಮೂಲಕ ಎಲ್ಲಾ ರಾಜ್ಯಗಳು ಮತ್ತು 3  ಹೊರರಾಷ್ಟ್ರಗಳಿಗೂ ಕೃಷ್ಣಕುಮಾರ್ ತಮ್ಮ ಸ್ಕೂಟರ್​ನಲ್ಲಿ ಹೋಗಿದ್ದಾರೆ. ಕೃಷ್ಣಕುಮಾರ್​​ರ ಈ ಮಾತೃ ಸೇವೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Contact Us for Advertisement

Leave a Reply