ಚೆನ್ನೈಗೆ ಚೀನಾ ಅಧ್ಯಕ್ಷ..! 5 ಗಂಟೆ ನಮೋ ಜೊತೆ ಚರ್ಚೆ..

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ಜೊತೆ 2ನೇ ಅನೌಪಚಾರಿಕ ಮಾತುಕತೆಗಾಗಿ ಚೆನ್ನೈಗೆ ಆಗಮಿಸಲಿದ್ದಾರೆ. ಉಭಯನಾಯಕರು 5 ಗಂಟೆಗಳ ಕಾಲ 4 ಸಭೆಗಳನ್ನು ನಡೆಸಲಿದ್ದಾರೆ. ಇಬ್ಬರೂ ನಾಯಕರು ಸಮುದ್ರ ದಡದಲ್ಲಿರುವ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕ್ಸಿ ಜಿನ್ ಪಿಂಗ್ ಸುಮಾರು 24 ಗಂಟೆಗಳ ಕಾಲ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆಯಲಿದ್ದಾರೆ. ಮೋದಿ ಮತ್ತು ಕ್ಸಿ ಜಿನ್‍ಪಿಂಗ್ ಮಹಾಬಲಿಪುರಂನಲ್ಲಿರುವ 3 ಪ್ರಸಿದ್ಧ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಆಗಮಿಲಿರುವ ಕ್ಸಿ ಜಿನ್‍ಪಿಂಗ್, ಶನಿವಾರ ಅದೇ ಟೈಂಗೆ ವಾಪಸ್ ಹೋಗಲಿದ್ದಾರೆ.

ಆದ್ರೆ ಅರುಣಾಚಲ ಪ್ರದೇಶದಲ್ಲಿ ಭಾರತ ಸಮರಾಭ್ಯಾಸ ನಡೆಸುತ್ತಿರುವ ಬಗ್ಗೆ ಚೀನಾ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಇದೇ ಕಾರಣಕ್ಕೆ ಈವರೆಗೆ ಕ್ಸಿ ಜಿನ್ ಪಿಂಗ್ ಆಗಮನ ಕುರಿತು ಅಧಿಕೃತವಾಗಿ ಆದೇಶಿಸಿಲ್ಲ.

Contact Us for Advertisement

Leave a Reply