ಆಂಟೆನಾ ಬದಲಿಸಲು ನಾಸಾ ಗಗನಯಾತ್ರಿಗಳಿಂದ ಸ್ಪೇಸ್​ವಾಕ್​!

masthmagaa.com:

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾದ ಗಗನಯಾತ್ರಿಗಳು ಆರೂವರೆ ಗಂಟೆಯ ಸ್ಪೇಸ್​ವಾಕ್ ಮಾಡಿದ್ದಾರೆ. ಈ ಮೂಲಕ ನಿಲ್ದಾಣದ ಹೊರಬದಿಯಲ್ಲಿ ಹಾಳಾಗಿದ್ದ ಎರಡು ಆಂಟೆನಾಗಳನ್ನು ರೀಪ್ಲೇಸ್ ಮಾಡಿದ್ದಾರೆ. ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿ ಥಾಮಸ್ ಮಾರ್ಶ್​​​ಬರ್ನ್​​, ಕಾಯ್ಲಾ ಬ್ಯಾರೋನ್​ ಆರ್ಬಿಟಿಂಗ್ ರಿಸರ್ಚ್​ ಲ್ಯಾಬ್​​ನ ಏರ್​​​​​​ಲಾಕ್​​ನಿಂದ ಹೊರಬಂದು ಈ ಕೆಲಸ ಮಾಡಿದ್ದಾರೆ. ಮಂಗಳವಾರವೇ ಈ ಸ್ಪೇಸ್​ವಾಕ್​ ಮಾಡ್ಬೇಕಾಗಿತ್ತು. ಆದ್ರೆ ಅವಶೇಷಗಳ ಅಪಾಯ ಎದುರಾಗಿದ್ರಿಂದ ಸ್ವಲ್ಪ ತಡವಾಗಿ ಅಂದ್ರೆ ಇವತ್ತು ಮಾಡಲಾಗಿದೆ. ಈ ರೀತಿ ಸ್ಪೇಸ್​ವಾಕ್ ಮುಂದೂಡಿರೋದು ಕಳೆದೆರಡು ದಶಕಗಳಲ್ಲೇ ಇದೇ ಮೊದಲಾಗಿದೆ. ಮೊದಲಿಗೆ ಈ ಅವಶೇಷಗಳು ಇತ್ತೀಚೆಗೆ ರಷ್ಯಾ ನಡೆಸಿದ ಕ್ಷಿಪಣಿ ಪರೀಕ್ಷೆಯಿಂದ ಬಿಡುಗಡೆಯಾಗಿದ್ವು ಅಂತ ಮೊದಲಿಗೆ ಹೇಳಲಾದ್ರೂ ಕೂಡ ಇದ್ರ ಮೂಲವನ್ನು ನಾಸಾ ಖಚಿತಪಡಿಸಿಲ್ಲ.

-masthmagaa.com

Contact Us for Advertisement

Leave a Reply