ನೆಲ್ಸನ್ ಮಂಡೇಲಾಗೆ ಸೇರಿದ 100 ವಸ್ತುಗಳು ಹರಾಜಿಗೆ!

masthmagaa.com:

ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ, ವರ್ಣಬೇಧ ನೀತಿ ವಿರುದ್ಧದ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಒಂದಷ್ಟು ವಸ್ತುಗಳನ್ನು ಮಾರಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ನೆಲ್ಸನ್ ಮಂಡೇಲಾರ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡಲು ಈ ನಿರ್ಧಾರಕ್ಕೆ ಬಂದಿದೆ ಕುಟುಂಬ. ಹರಾಜಿಗೆ ಇಟ್ಟಿರೋ ವಸ್ತುಗಳಲ್ಲಿ ನೆಲ್ಸನ್ ಮಂಡೇಲಾ 1998 ಮತ್ತು 2003ರಲ್ಲಿ ಕ್ವೀನ್ ಎಲಿಜಬೆತ್ ಭೇಟಿಯ ವೇಳೆ ಧರಿಸಿದ್ದ ಶರ್ಟ್​​​ಗಳು ಕೂಡ ಸೇರಿವೆ. ನ್ಯೂಯಾರ್ಕ್ ಮೂಲದ ಹರಾಜು ನಡೆಸೋ ಸಂಸ್ಥೆ ಘಾನ್​​ಝೀ ಡಿಸೆಂಬರ್ 11ರಿಂದ ಲೈವ್ ಮತ್ತು ಆನ್​ಲೈನ್​​ನಲ್ಲಿ ಹರಾಜು ಪ್ರಕ್ರಿಯೆ ಶುರು ಮಾಡಲಿದೆ. ಇದ್ರಲ್ಲಿ ನೆಲ್ಸನ್ ಮಂಡೇಲಾಗೆ ಬರಾಕ್ ಒಬಾಮಾ ಸೇರಿದಂತೆ ವಿಶ್ವದ ಇತರೆ ನಾಯಕರು ನೀಡಿರೋ ಗಿಫ್ಟ್​ಗಳು, ಪ್ಯಾಂಟ್​​, ಅವರು ಬಳಸುತ್ತಿದ್ದ ಬ್ರೀಫ್​ಕೇಸ್​ ಕೂಡ ಹರಾಜಿಗಿದೆ. ಇದ್ರಿಂದ ಬಂದ ದುಡ್ಡನ್ನು ಮಂಡೇಲಾರ ಸಮಾಧಿ ಇರೋ ಸ್ಥಳದಲ್ಲಿ ನಿರ್ಮಾಣವಾಗ್ತಿರೋ ಗಾರ್ಡನ್​​ಗೆ ಬಳಸಲು ನಿರ್ಧರಿಸಲಾಗಿದೆ. ಸೌತ್ ಆಫ್ರಿಕಾದ ಕುನುವಿನಲ್ಲಿ ನೆಲ್ಸನ್ ಮಂಡೇಲಾರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇವರು 2013ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ರು.

-masthmagaa.com

Contact Us for Advertisement

Leave a Reply