ಜೋ ಬೈಡೆನ್ ಸರ್ಕಾರಕ್ಕೆ ನಾಲಗೆಯಲ್ಲೇ ಜಾಡಿಸಿ ಒದ್ದ ಟ್ರಂಪ್!

masthmagaa.com:

ಅಫ್ಘಾನಿಸ್ತಾನದಿಂದ ಅಮೆರಿಕ ಹಿಂದಕ್ಕೆ ಸರಿಯೋ ವೇಳೆ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಿದ ರೀತಿಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಯುದ್ಧದಿಂದ ಹಿಂದೆ ಸರಿಯೋ ಪರಿಸ್ಥಿತಿಯನ್ನು ಇಷ್ಟು ಕೆಟ್ಟದಾಗಿ ಹ್ಯಾಂಡಲ್ ಮಾಡಿದ್ದು ಇತಿಹಾಸದಲ್ಲೇ ಇಲ್ಲ. ಸ್ಥಳಾಂತರ ಪ್ರಕ್ರಿಯೆ ಅಪೂರ್ಣವಾಗಿದೆ. ಜೊತೆಗೆ ಅಲ್ಲಿ ಬಿಟ್ಟು ಬಂದಿರೋ ಎಲ್ಲಾ ಶಸ್ತ್ರಾಸ್ತ್ರ, ಸಲಕರಣೆಗಳನ್ನು ತಕ್ಷಣ ತಾಲಿಬಾನಿಗಳಿಗೆ ಹಿಂತಿರುಗಿಸುವಂತೆ ಒತ್ತಾಯಿಸಬೇಕು. ಯಾಕಂದ್ರೆ ಅದು 85 ಬಿಲಿಯನ್ ಅಂದ್ರೆ ಎಂಟೂವರೆ ಸಾವಿರ ಕೋಟಿ ಡಾಲರ್ ಮೊತ್ತದ್ದು ಅಂತ ಗುಡುಗಿದ್ದಾರೆ. ಒಂದ್ವೇಳೆ ಅದನ್ನ ಹಿಂತಿರುಗಿಸದೇ ಇದ್ರೆ ನಾವು ಮಿಲಿಟರಿ ಶಕ್ತಿಯೊಂದಿಗೆ ಹೋಗಿ ಅದನ್ನು ಪಡೆದುಕೊಳ್ಳಬೇಕು. ಅಥವಾ ಕನಿಷ್ಠ ಅದನ್ನು ದಾಳಿ ಮೂಲಕ ನಾಶಪಡಿಸಬೇಕು ಅಂತ ಆಗ್ರಹಿಸಿದ್ಧಾರೆ. ಅಷ್ಟೆ ಸುಮ್ಮನಾಗದ ಟ್ರಂಪ್, ಇಂಥಾ ಮೂರ್ಖತನ ಮತ್ತು ಬುದ್ಧಿಯನ್ನೇ ಖರ್ಚು ಮಾಡದೇ ಸೇನೆ ಹಿಂತೆಗೆತದ ಬಗ್ಗೆ ಯಾರೂ ಕೂಡ ಯೋಚಿಸಿರಲಿಲ್ಲ ಅಂತ ಹೇಳಿದ್ದಾರೆ. ಬರೀ ಟ್ರಂಪ್ ಮಾತ್ರ ಅಲ್ಲ… ಅಮೆರಿಕದ ಹಲವಾರು ನಾಯಕರು ಬೈಡೆನ್ ಸರ್ಕಾರ ಈ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಿದ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply